ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ169.50 ಕೋಟಿ ರೂ. ವೆಚ್ಚದ, ಸುಧಾರಿತ ಬಾತ್ರೂಂ ನಿರ್ಮಿಸಿದೆ.
ಉಡಾವಣಾ ವಾಹಕ ಮೂಲಕ ಈ ಟಾಯ್ಲೆಟ್ ಒಳಗೊಂಡ ಸ್ನಾನಗೃಹವನ್ನು ಕಳುಹಿಸಲು ನಾಸಾ ನಾಳೆ ಮಹೋರ್ತ ಇಟ್ಟಿದೆ.
ಭವಿಷ್ಯದ ಚಂದ್ರ ಮತ್ತು ಮಂಗಳ ಕಾರ್ಯಾಚರಣೆಗಳಲ್ಲಿ ಇದೇ ರೀತಿಯ ವ್ಯವಸ್ಥೆಯನ್ನು ಬಳಸುವ ಮೊದಲು ಪರೀಕ್ಷಿಸಲು ಇದರ ಉಡಾವಣೆಗೆ ನಾಸಾ ಪ್ಲಾನ್ ಮಾಡಿದೆ.
ಸೆ.29ರಂದು (ನಾಳೆ) ವರ್ಜೀನಿಯಾದಲ್ಲಿನ ನಾಸಾದ ವ್ಯಾಲಾಪ್ಸ್ ಫ್ಲೈಟ್ ಫೆಸಿಲಿಟಿ ಕೇಂದ್ರದಿಂದ ರಾಕೆಟ್ ಮೂಲಕ ಶೌಚಗೃಹ ಗಗನಕ್ಕೆ ನೆಗೆಯಲಿದೆ.
ಪ್ರಸ್ತುತ ಇಲ್ಲಿ ಬಳಕೆಯಾಗುತ್ತಿರುವ ಬಾತ್ ರೂಂಗಿಂತ ಈ ಸುಧಾರಿತ ಮಾದರಿಯು, ಗಾತ್ರದಲ್ಲಿ ಶೇ.65ರಷ್ಟು ಚಿಕ್ಕದು ಮತ್ತು ಶೇ.40ರಷ್ಟು ಹಗುರವಿದೆ ಎಂದು ನಾಸಾ ಹೇಳಿದೆ.
ಈ ಶೌಚಗೃಹವನ್ನು ಯುನಿವರ್ಸಲ್ ವೇಸ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಯುಡಬ್ಲ್ಯೂಎಂಎಸ್) ಎಂದು ಕರೆಯಲಾಗುತ್ತಿದೆ.
ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಹೆಚ್ಚು ಆರಾಮದಾಯಕವಾಗಿದೆ. ಇದರಿಂದ ಗಗನಯಾತ್ರಿಗಳು ತಮ್ಮ ಜತೆ ಕೊಂಡೊಯ್ಯಲು ಭಾರಿ ಅನುಕೂಲಕರವಾಗಲಿದೆ ಎಂದು ಹೇಳಿದೆ.
ಗುರುತ್ವಾಕರ್ಷಣೆಯ ಕೊರತೆಯಿಂದಾಗಿ ಗಗನಯಾತ್ರಿಗಳಿಗೆ ಸದ್ಯ ಮಲ-ಮೂತ್ರ ವಿಸರ್ಜನೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಸಮಸ್ಯೆಗಳನ್ನು ತೊಲಗಿಸಲು ಈ ಪ್ರಯತ್ನ ಮಾಡಲಾಗಿದೆ.
PublicNext
28/09/2020 01:45 pm