ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೂಗಲ್ ಪ್ಲೇಸ್ಟೋರ್ ನಿಂದ Paytm App ಔಟ್

ನವದೆಹಲಿ: ಅಚ್ಚರಿ ಎಂಬಂತೆ ಗೂಗಲ್ ಪ್ಲೇ ಸ್ಟೋರ್ ನಿಂದ Paytm ಅಪ್ಲಿಕೇಶನ್ ತೆಗೆದು ಹಾಕಲಾಗಿದೆ.

ಆದ್ರೆ ಪೇಟಿಎಂ ಬ್ಯುಸಿನೆಸ್, ಪೇಟಿಎಂ ಮನಿ, ಪೇಟಿಎಂ ಮಾಲ್, ಮತ್ತು ಇತರ ಆ್ಯಪ್ ಗಳು ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ.

One 97 Communication Ltd. ಪೇಟಿಎಂ ಮಾಲಿಕತ್ವವನ್ನು ಹೊಂದಿತ್ತು. ಇದೀಗ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಿಂದ ರಿಮೂವ್ ಆಗಿದ್ದು ಆ್ಯಪಲ್ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಪೇಟಿಎಂ “ಪೇಟಿಎಂ ಆ್ಯಂಡ್ರಾಯ್ಡ್ ಆ್ಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ.

ಮಾತ್ರವಲ್ಲದೆ ಯಾವುದೇ ಹೊಸ ಅಪ್ ಡೆಟ್ ಗಳು ಕೂಡ ದೊರಕುವುದಿಲ್ಲ.

ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ’ ಎಂದಿದೆ.

ಈ ಬಗ್ಗೆ ಸ್ಟಷ್ಟನೆ ನೀಡಿರುವ ಗೂಗಲ್, ಪ್ರಮುಖವಾಗಿ ಪೇಟಿಎಂ ತನ್ನ ಗ್ರಾಹಕರಿಗೆ ಜೂಜು ಅಥವಾ ಆನ್ ಲೈನ್ ಪೇ ಗೇಮ್ ಗಳನ್ನ ಆಡಲು ಅವಕಾಶ ನೀಡುತ್ತಿದೆ.

ಹಾಗಾಗಿ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಡಿಜಿಟಲ್ ಪಾವತಿ ಬೆಹೆಮೊಥ್ ಪೇಟಿಎಂ ಅನ್ನು ತೆಗೆದು ಹಾಕಲಾಗಿದೆ ಎಂದಿದೆ.

Edited By : Nirmala Aralikatti
PublicNext

PublicNext

18/09/2020 04:01 pm

Cinque Terre

56.72 K

Cinque Terre

0