ಜಪಾನ್ ನ ನವೋದ್ಯಮ ಎ.ಎಲ್.ಐ ಟೆಕ್ನಾಲಜೀಸ್ ಜಗತ್ತಿನ ಮೊದಲ ವಾಣಿಜ್ಯ ಹೊವರ್ ಬೈಕ್ ಎಕ್ಸ್ ಟುರಿಸ್ಮೊ ಲಿಮಿಟೆಡ್ ಎಡಿಷನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಈ ಬೈಕಿನ ಹೆಸರು Xturismo. ಡೆಟ್ರಾಯಿಟ್ ಆಟೋ ಶೋ ಸಹ ಅಧ್ಯಕ್ಷ ಥಾಡ್ ಸ್ಜೋಟ್ ಬೈಕ್ ಅನ್ನು ಶ್ಲಾಘಿಸಿದ್ದಾರೆ. ಹೌದು ವಿಶ್ವದ ಮೊದಲ ಹಾರುವ ಬೈಕ್ ಜಪಾನ್ ನಲ್ಲಿ ಬಿಡುಗಡೆಯಾಗಿದೆ.
ಜಪಾನಿನ ಸ್ಟಾರ್ಟ್ ಅಪ್ ಕಂಪನಿ AERWINS ಟೆಕ್ನಾಲಜೀಸ್ ಈ ಬೈಕ್ ಅನ್ನು ನಿರ್ಮಿಸಿದೆ. ಇದನ್ನು ಸೆಪ್ಟೆಂಬರ್ 15 ರಂದು ಡೆಟ್ರಾಯಿಟ್ ಆಟೋ ಶೋನಲ್ಲಿ ಪ್ರಾರಂಭಿಸಲಾಯಿತು. ಪ್ರದರ್ಶನದ ವೇಳೆ ಈ ಬೈಕ್ ಅನ್ನು ತಜ್ಞರು ಪ್ರಶಂಸಿಸಿದ್ದಾರೆ.ಈ ಬೈಕ್ ಜನರ ಕನಸುಗಳನ್ನು ನನಸಾಗಿಸುತ್ತದೆ. ಆದರೆ ಇದಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕಂಪನಿಯ ಪ್ರಕಾರ, ಈ ಬೈಕಿನ ಬೆಲೆ 7 ಲಕ್ಷ 77 ಸಾವಿರ ಡಾಲರ್. ಹಾಗಾದರೆ ನಾವು ಈ ಹಣವನ್ನು ಭಾರತೀಯ ರೂಪಾಯಿಗಳಲ್ಲಿ ನೋಡಿದರೆ, 6 ಕೋಟಿ 18 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
ಈ ಬೈಕ್ ನ ತೂಕ 300 ಕೆ.ಜಿ. ಈ ಹಾರುವ ಬೈಕ್ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದಲ್ಲಿ ಹಾರಬಲ್ಲದು. ಇದು ಬ್ಯಾಟರಿಯ ಸಾಮಾರ್ಥ್ಯದಿಂದ ಚಲಿಸುತ್ತದೆ. ಕಂಪನಿಯ ಪ್ರಕಾರ, ಈ ಬೈಕಿನ ಬೆಲೆ 39,82,525 ರೂಪಾಯಿ.ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಪರಿಚಯಿಸಿರುವ ಈ ಬೈಕ್ ಜಪಾನ್ ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದರ ತಯಾರಕರು 2023 ರಲ್ಲಿ US ನಲ್ಲಿ ಮಾರಾಟವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ.
AERWINS ತನ್ನ ವೆಬ್ ಸೈಟ್ ನಲ್ಲಿ ಬೈಕ್ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ಹಾರುವ ಥ್ರಿಲ್ ಅನ್ನು ಸಂಯೋಜಿಸುತ್ತದೆ ಎಂದು ಹೇಳಿದೆ. ಈ ಬೈಕ್ ಖರೀದಿಸಬೇಕಾದರೆ ಜಪಾನ್ ಗೆ ಹೋಗಬೇಕು.
PublicNext
18/09/2022 03:13 pm