ಬೆಂಗಳೂರು: ಮಹಿಳಾ ಸಾರಥ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್ ಸ್ಟಾಪ್ ವಿಮಾನ ಜನವರಿ 9ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಹಾರಾಟ ಆರಂಭಿಸಿದೆ.
ಸತತ 17 ಗಂಟೆಗಳ ಕಾಲ ನಾನ್ ಸ್ಟಾಪ್ ಹಾರಾಟ ಆರಂಭಿಸಿದ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದೆ.
ಏರ್ ಇಂಡಿಯಾ 176 ಬೋಯಿಂಗ್ 777/200 LR ಫ್ಲೈಟ್ ನಲ್ಲಿ ನಾಲ್ವರು ಮಹಿಳಾ ಪೈಲಟ್ ಮತ್ತು 12 ಗಗನಸಕಿಯರಿದ್ದರು.
13,993 ಕಿ.ಮೀ. ದೂರವನ್ನು 17 ಗಂಟೆಗಳ ನಿರಂತರ ಪ್ರಯಾಣ ಮಾಡಿ ಸದ್ಯ ಈಗ ಕೆಐಎಗೆ ಆಗಮಿಸಿದ್ದಾರೆ.
238 ಆಸನಗಳನ್ನೊಳಗೊಂಡ ನೂತನ ವಿಮಾನ ಇದಾಗಿದೆ. ಇನ್ನು ಮುಂದೆ ಈ ವಿಮಾನ ಸ್ಯಾನ್ ಪ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ವಾರದಲ್ಲಿ 2 ದಿನ ಪ್ರಯಾಣ ಬೆಳೆಸಲಿದೆ.
ಮಹಿಳಾ ಪೈಲಟ್ ಗಳಾದ ಜೋಯ ಅಗರ್ವಾಲ್, ಪಾಪಗರಿತನ್ಮಯ್, ಆಕಾಂಶ ಸೋನವೇರ್, ಶಿವಾನಿ ಮನ್ಹಾಸ್ರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.
ಪ್ರಯಾಣಿಕರು, ಏರ್ಪೋಟ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಹೂಗುಚ್ಚ ನೀಡುವ ಮೂಲಕ ಬೆಂಗಳೂರಿಗೆ ಸ್ವಾಗತಿಸಿದ್ದಾರೆ.
PublicNext
11/01/2021 07:15 am