ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳಾ ಸಾರಥ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ- ಬೆಂಗಳೂರು ಏರ್ ಇಂಡಿಯಾ ವಿಮಾನ ಮೊದಲ ಪ್ರಯಾಣ

ನವದೆಹಲಿ : 'ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸುವ ಮೂಲಕ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ'

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಕಾರ್ಯ ನಿರ್ವಹಿಸುವ ಮೂಲಕ ತಾನು ಎಲ್ಲ ಕೆಲಸ ಕಾರ್ಯ ಮಾಡಲು ಸಿದ್ದ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಸದ್ಯ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ, ಬೆಂಗಳೂರು - ಸ್ಯಾನ್ ಫ್ರಾನ್ಸಿಸ್ಕೊ ನಡುವೆ ನೇರ ವಿಮಾನ ಸಂಚಾರ ಆರಂಭಿಸಿದ್ದು, ಶನಿವಾರ ರಾತ್ರಿಯಿಂದ ಸ್ಯಾನ್ ಫ್ರಾನ್ಸಿಸ್ಕೊದಿಂದ ಮೊದಲ ವಿಮಾನ ಸಂಚಾರ ಆರಂಭವಾಗಲಿದೆ.

'ಕ್ಯಾಪ್ಟನ್ ಜೋಯಾ ಅಗರ್ ವಾಲ್ ನೇತೃತ್ವದ ಮಹಿಳಾ ಪೈಲಟ್ ತಂಡ ಈ ಮಹತ್ತರವಾದ ಜವಾಬ್ದಾರಿಯನ್ನು ನಿಭಾಯಿಸಲಿದೆ.

ಈ ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ ಬೆಂಗಳೂರಿಗೆ ತಲುಪಲಿದೆ.

'ಕ್ಯಾಪ್ಟನ್ ಜೋಯಾ ಅಗರ್ ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ತಂಡವು ವಿಮಾನ ಸಂಚಾರದ ಸಾರಥ್ಯವಹಿಸಲಿದೆ.

ಸ್ಯಾನ್ ಫ್ರಾನ್ಸಿಸ್ಕೊ - ಬೆಂಗಳೂರು ನಡುವಿನ ವೈಮಾನಿಕ ಅಂತರವು ವಿಶ್ವದ ಅತ್ಯಂತ ಧೀರ್ಘ ವಾಯು ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಭೂಮಿಯ ಮೇಲಿನ ದುರ್ಗಮ ಪ್ರದೇಶ ಎನ್ನುವ ಉತ್ತರ ಧೃವವನ್ನು ದಾಟಿ ಬರುತ್ತವೆ.

ವಿಮಾನ ಎಐ 176 ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಿಂದ ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಹೊರಡಲಿದ್ದು, ಸೋಮವಾರ (ಸ್ಥಳೀಯ ಸಮಯ) ಮುಂಜಾನೆ 3.45 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

Edited By : Nirmala Aralikatti
PublicNext

PublicNext

09/01/2021 03:14 pm

Cinque Terre

59.91 K

Cinque Terre

5