ಚೆನ್ನೈ: ಹೆಲಿಕಾಪ್ಟರ್ ದುರಂತದಲ್ಲಿ ಡಿಫೆನ್ಸ್ ಸ್ಟಾಫ್ ಚೀಫ್ (ಸಿಡಿಎಸ್) ಬಿಪಿನ್ ರಾವತ್ ಸೇರಿದಂತೆ 13 ಜನ ಸಾವನ್ನಪ್ಪಿದ್ದರು. ಇನ್ನು ದುರಂತಕ್ಕೂ ಮುನ್ನ ಹೆಲಿಕಾಪ್ಟರ್ ಭೂಮಿಗೆ ಅತೀ ಸಮೀಪದಲ್ಲಿ ಹಾರಾಡಿದ ದೃಶ್ಯ ವೈರಲ್ ಆಗಿದೆ.
ಹೌದು ವಿಡಿಯೋದಲ್ಲಿ ಗಮನಿಸುವಂತೆ ಮಂಜು ಕವಿದ ವಾತಾವರಣದಲ್ಲಿ ಹೆಲಿಕಾಪ್ಟರ್ ಹಾರಾಡುತ್ತಿರುವುದನ್ನು ಕಾಣಬಹುದು. ನಂತರದಲ್ಲಿ ಮಂಜಿನಲ್ಲಿ ಹೆಲಿಕಾಪ್ಟರ್ ಮರೆಯಾಗಿದೆ. ಈ ಹೆಲಿಕಾಪ್ಟರ್ ಹಾರಾಟವನ್ನು ಸ್ಥಳೀಯರು ಕಂಡಿದ್ದಾರೆ.
ದೆಹಲಿಯಿಂದ ಸೇನಾ ವಿಮಾನದಲ್ಲಿ ತಮಿಳುನಾಡಿಗೆ ಬಿಪಿನ್ ರಾವತ್ ವೆಲ್ಲಿಂಗ್ಟನ್ ನ ಮಿಲಿಟರಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಹೊರಟಿದ್ದರು. ಒಟ್ಟು 14 ಮಂದಿ ಪಯಣ ಆರಂಭಿಸಿದ್ದರು. ವೆಲ್ಲಿಂಗ್ಟನ್ ಗೆ 7 ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್ ನಲ್ಲಿ ದೊಡ್ಡ ಶಬ್ಧದೊಂದಿಗೆ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿ 13 ಮಂದಿ ಹುತಾತ್ಮರಾಗಿದ್ದಾರೆ.
ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತಿದೆ. ಸೇನಾ ವಿಮಾನದಲ್ಲಿ ರಾವತ್, ಪತ್ನಿ ಮೃತದೇಹ ದೆಹಲಿಗೆ ರವಾನೆಯಾಗಲಿದೆ. ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ದೆಹಲಿಯ ರಾವತ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಳಿಕ ಕಾಮ್ರಾ ಜ್ ಮಾರ್ಗದಿಂದ ಅಂತಿಮಯಾತ್ರೆ ನಡೆಯಲಿದ್ದು, ದೆಹಲಿ ಕಂಟೋನ್ ಮೆಂಟ್ನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
PublicNext
09/12/2021 11:33 am