ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಸೇರಿ ದೇಶದ 8 ನಗರಗಳಲ್ಲಿ ಏರ್‌ಟೆಲ್‌ 5ಜಿ ಆರಂಭ, 4ಜಿ ಸಿಮ್‌ನಲ್ಲೇ ಸೇವೆ ಲಭ್ಯ

ಬೆಂಗಳೂರು: ಬೆಂಗಳೂರು, ಮುಂಬಯಿ, ದಿಲ್ಲಿ, ಚೆನ್ನೈ, ಹೈದರಾಬಾದ್‌ ಸೇರಿದಂತೆ ದೇಶದ 8 ನಗರಗಳಲ್ಲಿ ಏರ್‌ಟೆಲ್‌ ತನ್ನ 5ಜಿ ಸೇವೆಯನ್ನು ಆರಂಭಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಗುರುವಾರ ಪ್ರಕಟಿಸಿದೆ. 5ಜಿ ಬ್ಯಾಂಡ್‌ ಅನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್‌ ಮೂಲಕ ಹಳೆಯ ಸಿಮ್‌ ಕಾರ್ಡ್‌ ಮೂಲಕವೇ 5ಜಿ ಸೇವೆ ಪಡೆಯಬಹುದಾಗಿದೆ. 4ಜಿ ಪ್ಲಾನ್‌ ದರಕ್ಕೆ 5ಜಿ ಸೇವೆಯೂ ಲಭ್ಯ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

5ಜಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರು ಅತ್ಯಂತ ವೇಗದ ಏರ್‌ಟೆಲ್‌ 5ಜಿ ಪ್ಲಸ್‌ ಅನ್ನು ತಮ್ಮ ಪ್ರಸ್ತುತದ ಡೇಟಾ ಪ್ಲಾನ್‌ಗಳಲ್ಲಿಯೇ ಆನಂದಿಸಬಹುದು. 4ಜಿಗಿಂತಲೂ 20 ರಿಂದ 30 ಪಟ್ಟು ಹೆಚ್ಚಿನ ವೇಗದ ಸೇವೆಯನ್ನು 5ಜಿಯಲ್ಲಿ ಪಡೆಯಬಹುದು. ಇದರಿಂದ ಅದ್ಭುತ ಧ್ವನಿಯ ಅನುಭವ ಮತ್ತು ಸೂಪರ್‌ ವೇಗದ ಕರೆಯ ಸಂಪರ್ಕವನ್ನು ಗ್ರಾಹಕರು ಪಡೆಯಬಹುದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೋಪಾಲ್‌ ವಿಠಲ್‌, "ಏರ್‌ಟೆಲ್‌ ಕಳೆದ 27 ವರ್ಷಗಳಿಂದ ಭಾರತದ ಟೆಲಿಕಾಂ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಯಾವುದೇ 5ಜಿ ಹ್ಯಾಂಡ್‌ಸೆಟ್‌ನಲ್ಲಿ ಮತ್ತು ಗ್ರಾಹಕರು ಹೊಂದಿರುವ ಸಿಮ್‌ನಲ್ಲಿ ಹೊಸ 5ಜಿ ಕೆಲಸ ಮಾಡುತ್ತದೆ," ಎಂದಿದ್ದಾರೆ.

5ಜಿ ಲಾಭಗಳೇನು? ಶಿಕ್ಷಣ, ಆರೋಗ್ಯ ಸೇವೆ, ಉತ್ಪಾದನೆ, ಕೃಷಿ, ಮೊಬಿಲಿಟಿ ಮತ್ತು ಲಾಜಿಸ್ಟಿಕ್ಸ್‌ ಅನ್ನು 5ಜಿ ಬಲಗೊಳಿಸಲಿದೆ. ತ್ವರಿತ ವೇಗದ ಅಂತರ್ಜಾಲ ಲಭ್ಯ. ಹೈ ಡೆಫನಿಷನ್‌ ವಿಡಿಯೊ ಸ್ಟ್ರೀಮಿಂಗ್‌, ಗೇಮಿಂಗ್‌, ಮಲ್ಟಿಪಲ್‌ ಚಾಟಿಂಗ್‌, ಫೋಟೋಗಳ ಅಪ್‌ಲೋಡಿಂಗ್‌ ವೇಗ ಹೆಚ್ಚು.

Edited By : Abhishek Kamoji
PublicNext

PublicNext

07/10/2022 11:21 am

Cinque Terre

34.01 K

Cinque Terre

0