ನವದೆಹಲಿ: ಪ್ರಸ್ತುತ ಜಗತ್ತು ತಂತ್ರಜ್ಞಾನದ ಮೇಲೆ ಅವಲಂಬನೆಯಾಗಿದೆ. ಹಾಗಾಗಿ ದೇಶದ 7,287 ಕುಗ್ರಾಮಗಳಿಗೆ 4ಜಿ ಮೊಬೈಲ್ ಆಧಾರಿತ ಯುಎಸ್ ಒಎಫ್ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಆಂಧ್ರಪ್ರದೇಶ, ಛತ್ತೀಸ್ ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾಗಳ 44 ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಮುಂದಿನ ಐದು ವರ್ಷ 6,466 ಕೋಟಿ ರೂಪಾಯಿಯನ್ನು ಸಾರ್ವತ್ರಿಕ ಸೇವಾ ಬಾಧ್ಯತಾ ನಿಧಿ (ಯುಎಸ್ ಒಎಫ್ )ಯಲ್ಲಿ ಮೀಸಲು ಇರಿಸಲು ಒಪ್ಪಿಗೆ ಸೂಚಿಸಿದೆ. ಈ ಯೋಜನೆಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಈ ಒಪ್ಪಂದಕ್ಕೆ ನ.23ಕ್ಕೆ ಸಹಿ ಬೀಳುವ ಸಾಧ್ಯತೆ ಇದೆ.
4ಜಿ ನೆಟ್ವರ್ಕ್ ಲಭ್ಯವಾಗುವುದರಿಂದ ಆತ್ಮನಿರ್ಭರ ಭಾರತದ ಕಾರ್ಯಕ್ರಮಗಳಿಗೆ ಇದು ಪೂರಕವಾಗಿರಲಿದೆ.
PublicNext
18/11/2021 07:36 am