ಓಲಾ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಫ್ಯಾಕ್ಟರಿಯನ್ನು ತಮಿಳುನಾಡಿನಲ್ಲಿ ನಿರ್ಮಿಸಲು ಮುಂದಾಗಿದೆ. ಇದಕ್ಕೆ ಬರೋಬ್ಬರಿ 2,400 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, ಈ ಘಟಕದಿಂದ 10,000 ಉದ್ಯೋಗಗಳು ಸೃಷ್ಟಿಯಾಗಲಿದೆ ಎನ್ನುವುದು ಸಂತಸದ ವಿಚಾರವಾಗಿದೆ.
'ಆತ್ಮನಿರ್ಭರ್ ಭಾರತ್' ಪರಿಕಲ್ಪನೆ ಅಡಿಯಲ್ಲಿ ಓಲಾ ನೂತನ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಆರಂಭಿಸಲಿದೆ. ಈಗಾಗಲೇ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ವಿದೇಶಗಳ ಅವಲಂಬನೆ ಕಡಿಮೆ ಇರಲಿದೆ. ವಿಶೇಷವಾಗಿ ವಿದೇಶದಿಂದ ಬ್ಯಾಟರಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ಓಲಾ ಫ್ಯಾಕ್ಟರಿ ಸ್ಥಳೀಯವಾಗಿ ಬಿಡಿಭಾಗಗಳನ್ನು ಉತ್ಪಾದಿಸಲಿದೆ ಎಂದು ವರದಿಯಾಗಿದೆ.
PublicNext
15/12/2020 09:12 pm