ನವದೆಹಲಿ: ಆ್ಯಪಲ್ ಸಂಸ್ಥೆಯ ಹೊಸ ಉತ್ಪನ್ನವಾದ ಏರ್ ಪಾಡ್ಸ್ ಮ್ಯಾಕ್ಸ್ ವೈರ್ ಲೆಸ್ ಹೆಡ್ ಫೋನ್ ಬಿಡುಗಡೆಯಾಗಿದೆ.
ಮೊದಲ ಹೆಡ್ ಫೋನ್ ಸೀರೀಸ್ ಅನ್ನು Airpods Max ಎಂದು ಕರೆಯಲಾಗಿದೆ.
ಸುಧಾರಿತ ಸಾಫ್ಟ್ ವೇರ್ ತಂತ್ರಾಂಶವನ್ನು ಹೊಂದಿರುವ ಈ ಹೆಡ್ ಫೋನ್ ನಲ್ಲಿ ಆಡಿಯೋ ಗುಣಮಟ್ಟ ಅತ್ಯುತ್ತಮವಾಗಿದೆ.
ಇದರ ಬೆಲೆ $549 (ಭಾರತ-59,900) ಎಂದು ವರದಿಯಾಗಿದ್ದು, ಡಿಸೆಂಬರ್ 15ರಿಂದ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಏರ್ ಪಾಡ್ಸ್ ಮ್ಯಾಕ್ಸ್ ನಲ್ಲಿ ಆಡಿಯೋ ಅತ್ಯಧ್ಬುತವಾಗಿ ಕೇಳಿಬರಲಿದೆ. ಇದಕ್ಕಾಗಿ Active Noise Cancellation, Transparency mode, and spatial audio ಮುಂತಾದ ಸೌಲಭ್ಯ ನೀಡಲಾಗಿದೆ.
ಈ ಹೆಡ್ ಫೋನ್ ಸ್ಪೇಸ್ ಗ್ರೇ, ಸಿಲ್ವರ್, ಸ್ಕೈ ಬ್ಲೂ, ಗ್ರೀನ್ ಮತ್ತು ಪಿಂಕ್ ಕಲರಿನಲ್ಲಿ ಲಭ್ಯವಿದೆ.
ಏರ್ ಪಾಡ್ ಮ್ಯಾಕ್ಸ್, ಬಳಕೆದಾರರಿಗೆ ಆರಾಮದಾಯಕ ಅನುಭವ ನೀಡಲಿದೆ.
ಫ್ಲೆಕ್ಸಿಬಿಲಿಟಿ ಇರುವುದರಿಂದ ಇದರ ಬಳಕೆ ಸುಲಭ. ಹೆಡ್ ಪೋನ್ ನಲ್ಲಿ ವಾಲ್ಯೂಮ್ ಕಂಟ್ರೋಲ್, ಪ್ಲೇ ಮತ್ತು Pause, ಸ್ಕಿಪ್ ಬಟನ್, ಸಿರಿ ಆಕ್ಟಿವೇಟ್ ಬಟನ್, ಫೋನ್ ಕರೆಗಳನ್ನು ಆನ್ ಮತ್ತು ಎಂಡ್ ಮಾಡುವ ಫೀಚರ್ ಗಳನ್ನು ನೀಡಲಾಗಿದೆ.
ಮಾತ್ರವಲ್ಲದೆ ಹೆಡ್ ಪೋನ್ ನಲ್ಲಿ ಆಟೋಮ್ಯಾಟಿಕ್ ಸೆನ್ಸಾರ್ ಆಯ್ಕೆ ನೀಡಲಾಗಿದ್ದು, ಒಮ್ಮೆ ಧರಿಸಿದ ಕೂಡಲೇ ಸ್ಮಾರ್ಟ್ ಪೋನ್, ವಾಚ್ ಅಥವಾ 'ಸಿರಿ'ಗೆ ಕನೆಕ್ಟ್ ಆಗುವುದು.
PublicNext
09/12/2020 02:58 pm