ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಕಾಲರ್ ಟೋನ್ ಕಿರಿ, ಕಿರಿ ತಪ್ಪಿಸಲು ಹೀಗೆ ಮಾಡಿ

ನವದೆಹಲಿ: ಕೋವಿಡ್ ಆರಂಭವಾದ ಬಳಿಕ ಕಳೆದ 7-8 ತಿಂಗಳಿನಿಂದ ಎಲ್ಲಾ ಕರೆಗಳಲ್ಲೂ ಕೋವಿಡ್ ಜಾಗೃತಿ ಕಾಲರ್ ಟೋನ್ ಅನ್ನು ಸರ್ಕಾರ ಜಾರಿಗೆ ತಂದಿದೆ.

ಆದರೆ ಪ್ರತೀ ಕರೆಯಲ್ಲೂ ಈ ಸಾಲುಗಳನ್ನು ಕೇಳಿದ ಕೆಲವು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಗ್ರಾಹಕರು ಬಯಸಿದರೆ ತಮ್ಮ ಕಾಲರ್ ಟೋನ್ ಕಿರಿ, ಕಿರಿ ತಪ್ಪಿಸುವ ಅವಕಾಶ ಲಭ್ಯವಿದೆ.

ಏರ್ ಟೇಲ್ ಗ್ರಾಹಕರು ತಮ್ಮ ನಂಬರ್ ನಿಂದ *642*224# ಮತ್ತು 1 ನ್ನು ಒತ್ತಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಕೋವಿಡ್ ಕಾಲರ್ ಟೋನ್ ತಡೆಹಿಡಿಯಲಾದ ಸಂದೇಶ ಬರುತ್ತದೆ.

ವೋಡಾಪೋನ್ ಗ್ರಾಹಕರು ನಿಮ್ಮ ಸಂಖ್ಯೆ ಯಿಂದ "CANCT" ಎಂದು ನಮೂದಿಸಿ 144 ಸಂಖ್ಯೆಗೆ ಕಳುಹಿಸಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಕೋವಿಡ್ ಕಾಲರ್ ಟೋನ್ ತಡೆಹಿಡಿಯಲಾದ ಸಂದೇಶ ಬರುತ್ತದೆ.

ಜಿಯೋ ಗ್ರಾಹಕರು ನಿಮ್ಮ ಜಿಯೋ ಸಂಖ್ಯೆಯಿಂದ "STOP"ಎಂಬುದಾಗಿ ನಮೂದಿಸಿ 155223 ಗೆ ಸಂದೇಶ ಕಳುಹಿಸಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಕೋವಿಡ್ ಕಾಲರ್ ಟೋನ್ ತಡೆಹಿಡಿಯಲಾದ ಸಂದೇಶ ಬರುತ್ತದೆ.

ಬಿ ಎಸ್ ಎನ್ ಎಲ್ ಗ್ರಾಹಕರು "UNSUB" ಎಂದು ನಮೂದಿಸಿ 56700 ಅಥವಾ 56799 ಗೆ ಕಳುಹಿಸಿ ಕಟ್ ಆಗಿರುವ ಸಂದೇಶ ಬರುತ್ತದೆ.

Edited By : Nirmala Aralikatti
PublicNext

PublicNext

02/12/2020 07:29 pm

Cinque Terre

57.55 K

Cinque Terre

43