ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಯೊದಿಂದ ಮತ್ತೊಂದು ಪೋಸ್ಟ್ ಪೇಯ್ಡ್ ಮೆಗಾ ಪ್ಲಾನ್ ಘೋಷಣೆ

ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಜಿಯೊ ತನ್ನದೇ ಆದ ಗ್ರಾಹಕರನ್ನು ಹೊಂದಿದ್ದು ಸಧ್ಯ ತನ್ನ ಗ್ರಾಹಕರಿಗಾಗಿ ಮತ್ತೊಂದು ಪೋಸ್ಟ್ ಪೇಯ್ಡ್ ಯೋಜನೆಗಳನ್ನು ಘೋಷಿಸಿದೆ.

ಆರಂಭಿಕ ಯೋಜನೆಯ ಮಾಸಿಕ ಚಂದಾ ಮೊತ್ತವು ₹ 399. ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಮತ್ತು ಡಿಸ್ನಿ+ಹಾಟ್ ಸ್ಟಾರ್ ಒಟಿಟಿ ಚಂದಾದಾರಿಕೆ ಇದರ ಜೊತೆಯಲ್ಲೇ ಲಭ್ಯವಾಗಲಿದೆ.

₹ 399 ಯೋಜನೆಯ ಜೊತೆ 75 ಜಿ.ಬಿ. ಡೇಟಾ ಸಿಗುತ್ತದೆ. ತಿಂಗಳ ಅಂತ್ಯಕ್ಕೆ ಬಳಕೆಯಾಗದೆ ಉಳಿಯುವ ಡೇಟಾ, ಮುಂದಿನ ತಿಂಗಳಿಗೆ ವರ್ಗಾವಣೆ ಆಗುತ್ತದೆ.

ಗರಿಷ್ಠ 200 ಜಿ.ಬಿ.ವರೆಗೆ ಹೀಗೆ ಡೇಟಾ ಸೇರ್ಪಡೆ ಆಗುತ್ತಲೇ ಇರುತ್ತದೆ.

ಬೇರೆ ಮೊಬೈಲ್ ನೆಟ್ ವರ್ಕ್ ಗಳಲ್ಲಿ ಇರುವ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ತನ್ನತ್ತ ಸೆಳೆಯಲು ಜಿಯೊ ಈ ಕೊಡುಗೆಗಳನ್ನು ಜಾರಿಗೆ ತಂದಿದೆ ಎಂದು ಮೂಲಗಳು ಹೇಳಿವೆ.

₹ 399ರ ಮಾಸಿಕ ಚಂದಾ ದರಕ್ಕೆ ನೆಟ್ ಫ್ಲಿಕ್ಸ್ ಸಿಗುತ್ತಿರುವುದು ಪೋಸ್ಟ್ ಪೇಯ್ಡ್ ಸೇವೆಗಳಲ್ಲಿ ಇದೇ ಮೊದಲು ಎಂದು ಮೂಲಗಳು ಹೇಳಿವೆ. ಎಲ್ಲಾ ಯೋಜನೆಗಳಲ್ಲೂ ಅನಿಯಮಿತ ಕರೆಗಳ ಸೌಲಭ್ಯ ಇದೆ.

Edited By : Nirmala Aralikatti
PublicNext

PublicNext

23/09/2020 08:14 am

Cinque Terre

55.89 K

Cinque Terre

0

ಸಂಬಂಧಿತ ಸುದ್ದಿ