ಗದಗ: ಜಿಲ್ಲೆಯ ನರಗುಂದ ತಾಲೂಕಿನ ಅರಷಿನಗೋಡಿ ಗ್ರಾಮದಲ್ಲಿ ರೈತರು ಹೆಸರು ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಇದರಲ್ಲಿ ವಿಶೇಷ ಏನು ಅಂತಿರಾ ಇಲ್ಲಿದೆ ನೋಡಿ ಸ್ಟೋರಿ.
ರೈತರು ಹೆಸರು ಬೆಳೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರು ಕೊರತೆಯಿಂದ ರೈತರು ಡ್ರೋನ್ ಮೊರೆ ಹೋಗಿದ್ದಾರೆ. ಪ್ರತಿ ಎಕರೆಗೆ ಐದು ನೂರು ರೂ. ವೆಚ್ಚದಲ್ಲಿ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಮಾಡಿಸುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಡ್ರೋನ್ ಔಷಧಿ ಸಿಂಪಡಣೆ ಮಾಡುತ್ತಿದ್ದೆ. ಇದು ಸಹ ರೈತರಿಗೆ ತುಂಬಾನೆ ಅನುಕೂಲವಾಗಿದೆ.
ಮಳೆಯೂ ಸ್ವಲ್ಪಮಟ್ಟಿಗೆ ಬಿಡುವು ನೀಡಿದರಿಂದ ರೈತರು ಡ್ರೋನ್ ಮೂಲಕ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಮಳೆಯೂ ಇನ್ನೂ ಹತ್ತಿಕೊಂಡರೆ ಬೆಳೆದ ಬೆಳೆ ಕೈಗೆ ಬರುವುದಿಲ್ಲ ಎಂದು ರೈತರು ಡ್ರೋನ್ ಮೋರೆ ಹೋಗಿದ್ದಾರೆ.
- ಸುರೇಶ ಲಮಾಣಿ ಪಬ್ಲಿಕ್ ನೆಕ್ಸ್ಟ ಗದಗ
PublicNext
21/07/2022 01:00 pm