ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿ ವಲಯಕ್ಕೂ ಡ್ರೋನ್ ಲಗ್ಗೆ!; ಅನ್ನದಾತರಿಗೆ ಹಿಗ್ಗು

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಕೃಷಿ ಚಟುವಟಿಕೆಗಳಿಗೆ ಕೂಲಿಯಾಳುಗಳ ಅವಲಂಬನೆ ಕಡಿಮೆ ಮಾಡಲು ಹಾಗೂ ಕೃಷಿ ಕ್ಷೇತ್ರದಲ್ಲಿಯೂ ಹೊಸ ಹೊಸ ತಂತ್ರಜ್ಞಾನ ಬಳಸುವುದಕ್ಕಾಗಿ ಹೊಲದಲ್ಲಿ ಡ್ರೋನ್ ಉಪಯೋಗ ಆವಿಷ್ಕರಿಸಲಾಗಿದೆ.

ನಬಾರ್ಡ್‌ ಸಹಯೋಗದಿಂದ ರೈತರು ನೂತನ ಇಸ್ರೇಲ್‌ ಮಾದರಿ ತಂತ್ರಜ್ಞಾನ ಬಳಸಿಕೊಳ್ಳಲು ಅವಕಾಶ ದೊರೆತಿದ್ದು, ಕೃಷಿ ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಯಲಹಂಕದ ಜಿಕೆವಿಕೆಯಲ್ಲಿ ನಡೆಯುತ್ತಿರುವ 2021ರ‌ ಕೃಷಿ ಮೇಳದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ.

ದೊಡ್ಡ ದೊಡ್ಡ ಸಭೆಗಳಲ್ಲಿ ದೃಶ್ಯ ಚಿತ್ರೀಕರಿಸಲು ಹಾಗೂ ಭದ್ರತೆಗೆ ಬಳಸುವ ಸಾಧನವಾಗಿದ್ದ ಈ ಡ್ರೋನ್‌, ಈಗ ರೈತರ ಹೊಲ- ಗದ್ದೆಗಳ ಮೇಲೆ ಹಾರಾಡುತ್ತಾ, ರಾಸಾಯನಿಕ ಸಿಂಪಡಿಸುತ್ತಿದೆ.

ಎಕರೆಗೆ 250- 300 ರೂ. ಖರ್ಚು ಡ್ರೋನ್‌ ಮೂಲಕ ಕ್ರಿಮಿನಾಶಕ ಸಿಂಪಡಣೆ ಆಗುತ್ತಿದೆ.

ಸಾಮಾನ್ಯವಾಗಿ ಒಂದು ಎಕರೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಹೆಚ್ಚು ಸಮಯ ಬೇಕು. ಆದರೆ, ಡ್ರೋನ್‌ ಮೂಲಕ ಕೆಲವೇ ನಿಮಿಷಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬಹುದು. ಇದರಿಂದ ಹಣ ಹಾಗೂ ಸಮಯದ ಉಳಿತಾಯವಾಗುತ್ತಿದೆ ಎನ್ನುತ್ತಾರೆ‌ ಉತ್ಪಾದಕರು.

"ಸುಮಾರು 10 ಲಕ್ಷ ರೂ.ನ ಈ ಡ್ರೋನ್‌ ಗೆ 11 ಲೀಟರ್‌ ಸಾಮರ್ಥ್ಯದ ಕ್ಯಾನ್‌ ಅಳವಡಿಸಲಾಗಿದೆ. ಜತೆಗೆ ಜಿಪಿಎಸ್‌ ಸಹ ಇದ್ದು, ಎಷ್ಟು ಎಕರೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ ಎಂಬುದರ ನಿಖರ ಲೆಕ್ಕ ತಿಳಿಯಬಹುದು. ಕಡಲೆ, ತೊಗರಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ನಿಂಬೆ, ಮಾವು, ಸಪೋಟ ಸೇರಿ ಎತ್ತರದ ಮರಗಳಿಗೂ ಸುಲಭವಾಗಿ ಕ್ರಿಮಿನಾಶಕ ಸಿಂಪಡಿಸಬಹುದು. ಒಟ್ಟಾರೆ ಕೆಲಸಗಾರರ ಕೊರತೆ ನೀಗಿಸಲು ಡ್ರೋನ್ ಬಳಕೆ ರೈತರಿಗೆ ಸಹಕಾರಿಯಾಗಲಿದೆ".

Edited By : Nagesh Gaonkar
PublicNext

PublicNext

11/11/2021 08:12 pm

Cinque Terre

82.23 K

Cinque Terre

3