ಮಾನವನ ಸ್ವಾರ್ಥಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಸಾಗಿದೆ. ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಕಾಲಿಡುತ್ತಿವೆ. ಹೀಗಾಗಿ ಅನೇಕ ಪ್ರಾಣಹಾನಿಗಳು ಸಂಭವಿಸಿವೆ. ಅಷ್ಟೇ ಆನೆ, ಜಿಂಕೆ, ಕಾಡೆಮ್ಮೆಗಳು ಬೆಳೆ ಹಾನಿ ಮಾಡಿದ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಇಂತಹ ಹಾನಿಯನ್ನು ತಪ್ಪಿಸಲು ತೋಳ ಒಂದು ಬಂದಿದೆ.
ಹೌದು... ಜಪಾನ್‌ನ ಟಕಿಕಾವಾದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಬರಲು ಭಯಪಡಬೇಕಾದಂತಹ ಸ್ಥಿತಿ ಉಂಟಾಗಿದೆ. ಹೀಗಾಗಿ ಇಲ್ಲಿನ ಅಧಿಕಾರಿಗಳು ಸಖತ್ ಪ್ಲ್ಯಾನ್ ಮಾಡಿದ್ದಾರೆ. ರೋಬೋಟ್‌ಗಳನ್ನು ಬಳಸಿ ಕರಡಿಗಳನ್ನು ಓಡಿಸಲು ಆರಂಭಿಸಿದ್ದಾರೆ. ರೋಬೋಟ್ ತೋಳದ ಶಬ್ದ ಹಾಗೂ ಬೆಳಕಿಗೆ ಕರಡಿಗಳು ಜಮೀನಿನತ್ತ ಬರುವುದೇ ಕಡಿಮೆಯಾಗಿದೆ.
ರೋಬೋಟ್ ತೋಳವನ್ನು ಕಂಡು ಕರಡಿಗಳು ಓಡುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ರೋಬೋಟ್ ತಯಾರಕರಾದ ಓಹ್ತಾ ಸೀಕಿ 2018ರಿಂದ ಇದುವರೆಗೆ ಇಂತಹ ಸುಮಾರು 70 ರೋಬೋಟ್‌ಗಳನ್ನು ಮಾರಾಟ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ನೆಟ್ಟಿಗರು ಬಲು ಕುತೂಹಲದಿಂದ ನೋಡುತ್ತಿದ್ದಾರೆ.
PublicNext
18/11/2020 10:49 am