ನವದೆಹಲಿ- ಹೆದರಿಸಿ, ಬೆದರಿಸಿ ಹೇಳಿದ್ರೆ ಯಾವ ಮಕ್ಕಳೂ ಏನನ್ನೂ ಕಲಿಯಲಾರವು. ಹೇಳಬೇಕಾದುದನ್ನು ಕೊಂಚ ಮನೋರಂಜನಾ ಹಿನ್ನಲೆಯಲ್ಲಿ ಹೇಳಿದ್ರೆ ಚಿನ್ನರಿಗೆ ಅದು ಇಷ್ಟವಾಗಬಲ್ಲದು. ಹೇಳಿದ ವಿಷಯ ಅರ್ಥವಾಗಬಲ್ಲದು.
ಇದಕ್ಕೆಂದೇ ಈಗ ಹೊಸದೊಂದು ಮೊಬೈಲ್ ಅಪ್ಲಿಕೇಶನ್ ವಿನ್ಯಾಸವಾಗಿದೆ. ಅಂದ್ ಹಾಗೆ ಇದನ್ನ ವಿನ್ಯಾಸಗೊಳಿಸಿದ್ದು 4ನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಪೋರಿ ಎಂದರೆ ನೀವು ನಂಬಲೇಬೇಕು.
ಯೆಸ್. ರಾಷ್ಟ್ರ ರಾಜಧಾನಿ ನವದೆಹಲಿಯ ಗುರುಗ್ರಾಮದ ಸನ್ ಸಿಟಿ ಶಾಲೆಯಲ್ಲಿ 4 ನೇ ತರಗತಿ ಓದುತ್ತಿರುವ ಬಾಲೆ ಮಾನ್ಯ ಸಿಂಘಾಲ್ ಎಂಬ ವಿದ್ಯಾರ್ಥಿನಿ ಈ ಆ್ಯಪ್ಅನ್ನು ಸಿದ್ಧಪಡಿಸಿದ್ದಾಳೆ. ಈ ಆ್ಯಪ್ಅನ್ನು ಸಿದ್ಧಪಡಿಸಲು ಮಾನ್ಯಾಳಿಗೆ ಆಕೆಯ ತಂಗಿಯೇ ಸ್ಪೂರ್ತಿಯಂತೆ.
ಮನೆಯಲ್ಲಿ ಆಟವಾಡುವ ಮಾನ್ಯಳ ತಂಗಿ ತನ್ನ ಸುತ್ತಲೂ ಇರುವ ವಸ್ತುಗಳನ್ನು ಗುರುತಿಸಲು ಕಷ್ಟವಾಯಿತಂತೆ. ಹೀಗಾಗಿ ಅದಕ್ಕಾಗಿಯೇ ಮಾನ್ಯ "ಪಿಕಾಬೂ" (pickaboo) ಎಂಬ ಆ್ಯಪ್ಅನ್ನು ಸಿದ್ಧಪಡಿಸಿದ್ದಾಳೆ. ಈ ಮೂಲಕ ಕಲಿಕೆ ಇನ್ನಷ್ಟು ಸರಳವಾಗಲಿದೆ. ಯಾವುದೇ ವಸ್ತುಗಳನ್ನ ಸ್ಕ್ಯಾನ್ ಮಾಡುವ ಮೂಲಕ ಅದರ ಹೆಸರು ತಿಳಿಯಬಹುದು. ಜೊತೆಗೆ ಪ್ರಾಣಿಗಳ ಹೆಸರನ್ನೂ ತಿಳಿಯಬಹುದು.
ಇದಕ್ಕೂ ಮುನ್ನ ಕಲಿಕೆಗೆ ನೆರವಾಗುವ ಹಲವಾರು ಆ್ಯಪ್ ಗಳನ್ನು ವಿನ್ಯಾಸಗೊಳಿಸಿರುವ ಮಾನ್ಯ ಇನ್ಮುಂದೆ ಶಾಸ್ತ್ರೀಯ ನೃತ್ಯ ಕಲಿಸಲೂ ನೆರವಾಗಬಲ್ಲ ಮತ್ತೊಂದು ಮೊಬೈಲ್ ಆ್ಯಪ್ ವಿನ್ಯಾಸಗೊಳಿಸುವ ಧಾವಂತದಲ್ಲಿದ್ದಾಳೆ.
PublicNext
23/10/2020 03:37 pm