ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಗಮಂಟಪ ಲೋಕಾರ್ಪಣೆ

ಚಿಕ್ಕಬಳ್ಳಾಪುರ : ಈಶಾ ಫೌಂಡೇಶನ್ ವತಿಯಿಂದ ತಮಿಳುನಾಡಿನ ಕೊಯಂಮತ್ತೂರಿನಲ್ಲಿರುವಂತೆ 112 ಅಡಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ರಸ್ತೆಯಲ್ಲಿರುವ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಹದೇವರ ಬೆಟ್ಟದ ತಪ್ಪಲಿನಲ್ಲಿ ಬಹುತೇಕ ಮುಕ್ತಾಯವಾಗಿದೆ.

ಇನ್ನು ಶಿವನ ಅವತಾರದ ಪ್ರತಿಮೆ ನಿರ್ಮಾಣದ ಕಾರ್ಯದ ಅಂಗವಾಗಿ ಈಶಾ ಫೌಂಡೇಶನ್ ವತಿಯಿಂದ ನಾಗಮಂಟಪ ಲೋಕಾರ್ಪಣೆ ನೇರವೇರಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಕೆ. ಸುಧಾಕರ್ ಆಗಮಿಸಿದ್ದರು. ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನಾಗಮಂಟಪ ಪೂಜಾಗಳನ್ನು ನಡೆಸಿ ಲೋಕಾರ್ಪಣೆಗೊಳಿಸಿದರು.

2023ರ ಮಹಾಶಿವರಾತ್ರಿಯಂದು ಈ ಆದಿಯೋಗಿ ಶಿವನ ಪ್ರತಿಮೆ ಎದುರು ಸದ್ಗುರುಗಳ ನೇತೃತ್ವದಲ್ಲಿ ಜಾಗರಣೆ, ಶಿವನ ಆರಾಧನೆ ನಡೆಯಲಿದೆ.

Edited By : Nirmala Aralikatti
PublicNext

PublicNext

10/10/2022 03:51 pm

Cinque Terre

31.89 K

Cinque Terre

0

ಸಂಬಂಧಿತ ಸುದ್ದಿ