ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಿಲ್ಲೆಯಲ್ಲಿ ಗಣೇಶೋತ್ಸವಕ್ಕೆ ಭಾರಿ ಮೆರಗು

ಗದಗ: ಎರಡು ವರ್ಷ‌ ಕೊರೊನಾದಿಂದ‌ ಮಂಕಾಗಿದ್ದ ಗಣಪತಿ ಹಬ್ಬಕ್ಕೆ ಈ ಬಾರಿ ಮೆರಗು ಹೆಚ್ಚಾಗಿದೆ. ಮುದ್ರಣ ಕಾಶಿ ಗದಗದಲ್ಲಿ ಗಣಪತಿ ಹಬ್ಬವನ್ನ ಭಕ್ತರು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ನಗರದ ಮನೆ ಮನೆಯಲ್ಲಿ ವಿಘ್ನೇಶ್ವರ ಪೂಜೆ ಕೂರಿಸಲು ಭಕ್ತರು ಸಿದ್ದತೆ ನಡೆಸಿದ್ದಾರೆ‌.

ಹೀಗೆ ಕಲರ್ ಫುಲ್ ಆಗಿ ರೆಡಿಯಾಗಿರುವ ವಿಘ್ನೇಶ್ವರನ ಮೂರ್ತಿಗಳು..ಖರೀದಿ ಮಾಡಲು ಬಂದ ಭಕ್ತರು..! ಒಂದೇ ಸೂರಿನಲ್ಲಿ 4 ಸಾವಿರ ಮೂರ್ತಿಗಳ ಮಾರಾಟಕ್ಕೆ ವ್ಯವಸ್ಥೆ..! ವಿಘ್ನ ನಿವಾರಕ‌ನ ಮೂರ್ತಿ ಖರೀದಿಗೆ ಮುಗಿ ಬಿದ್ದ ಭಕ್ತರು, ಈ ದೃಶ್ಯಗಳು ಕಂಡಿದ್ದು, ಗದಗನ ಎಪಿಎಮ್ಸಿಯಲ್ಲಿರುವ ವಿವೇಕಾನಂದ ಸಭಾ ಭವನದಲ್ಲಿ,

ಒಂದೇ ಸೂರಿನಲ್ಲಿ 17 ಮಳಗಿಗಳನ್ನು ಮಾಡಲಾಗಿದೆ. 4000ಕ್ಕೂ ಹೆಚ್ಚು ಗಣಪತಿ ಮೂರ್ತಿಗಳು ಮಾರಾಟ ಮಾಡಲಾಗ್ತಿದೆ. ಗದಗ-ಬೆಟಗೇರಿ ಧಾರವಾಡ, ಕನ್ನೂರು, ಲಕ್ಷ್ಮೇಶ್ವರ ಸೇರಿದಂತೆ ಅನೇಕ ಕಡೆಯಿಂದ ಗಣೇಶನ ಮೂರ್ತಿ ತಯಾರಿಸಿದ ಕಲಾವಿದರು ಮಾರಾಟ ಮಾಡಲು ಬಂದಿದ್ದಾರೆ. ಮೂರ್ತಿಗಳ ಖರೀದಿಯ ಭರಾಟೆ ಜೋರಾಗಿದೆ.

ವಿಘ್ನೇಶ್ವರನಿಗೆ ಆರುತಿ ಬೆಳಗಿ ಪೂಜೆ ಸಲ್ಲಿಸಿ, ಮನೆ ಮನೆಯಲ್ಲಿ, ಸಾರ್ವಜನಿಕವಾಗಿ ಗಣಪತಿಯ ಪ್ರತಿಷ್ಟಾಪನೆ ಮಾಡಿ ಸಂಭ್ರಮಿಸಿದ್ದರು. ಪಟಾಕಿ ಹಚ್ಚಿ ಗಣಪತಿಯನ್ನ ಮೆರವಣಿಗೆ ಮೂಲಕ ಸಂಭ್ರಮಿಸುತ್ತಿದ್ದಾರೆ. ಹಲವು ನಿಬಂಧನೆಗಳ ಮೂಲಕ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ.

Edited By : Shivu K
PublicNext

PublicNext

31/08/2022 02:12 pm

Cinque Terre

36.5 K

Cinque Terre

0