ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಸುಳ್ಯದಲ್ಲಿ ಅಭೂತಪೂರ್ವ ಸ್ವಾಗತ

ಸುಳ್ಯ: ಸ್ವಾತಂತ್ರ್ಯ ವೀರ, ಅಮರ ಸುಳ್ಯ ಕ್ರಾಂತಿಯ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ಸುಳ್ಯದ ಜನತೆ ಜಾತಿ, ಧರ್ಮ, ಪಕ್ಷ ಭೇದ ಮರೆತು ಎಲ್ಲರೂ ಒಟ್ಟಾಗಿ, ಒಂದಾಗಿ ಅಭೂತಪೂರ್ವ ಸ್ವಾಗತ ನೀಡಿದರು. ಎಲ್ಲಾ ಧರ್ಮದವರು, ಎಲ್ಲಾ ಪಕ್ಷದವರು, ಎಲ್ಲ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸಾರ್ವಜನಿಕರು ಹೀಗೆ ಸುಳ್ಯಕ್ಕೆ ಸುಳ್ಯವೇ ಹರಿದು ಬಂದು ಸ್ವಾತಂತ್ರ್ಯ ವೀರನ ಪ್ರತಿಮೆಗೆ ಅದ್ದೂರಿ ಸ್ವಾಗತ ಕೋರಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಇಂದು ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಪ್ರತಿಮೆಯನ್ನು ಕಾಯರ್ತೋಡಿಯಲ್ಲಿ ಕೆದಂಬಾಡಿ ಕುಟುಂಬಸ್ಥರು ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ರಸ್ತೆಯ ಎರಡೂ ಬದಿಯಲ್ಲಿ ರಾಷ್ಟ್ರ ಧ್ವಜ ಹಿಡಿದು ನಿಂತ ಸಾರ್ವಜನಿಕರು, ಹಾಗು ತಾಲೂಕಿನ ವಿವಿಧ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಮೆಗೆ ಪುಷ್ಪಗಳ ಮಳೆಗೆರೆದು ಸ್ವಾಗತಿಸಿ ನಗರದಲ್ಲಿ ಅದ್ದೂರಿ ಮೆರವಣಿಗೆಯಲ್ಲಿ.ಪೂರ್ಣ ಕುಂಭ, ಚೆಂಡೆ, ವಾದ್ಯ,ಮೇಳ, ಸಿಂಗಾರಿ ಮೇಳ, ಹುಲಿ ವೇಷ, ವಿವಿಧ ರೀತಿಯ ಗೊಂಬೆಗಳು, ಕಲಾ ಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಿತು.

ಸಮಾಜದ ನಾನಾ ವಿಭಾಗಗಳಿಂದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಧ್ವಜಾರೋಹಣ ನೆರವೇರಿಸಿದರು. ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಪೀಠಾಧಿಪತಿ ಧರ್ಮಪಾಲನಾಥ ಸ್ವಾಮೀಜಿ, ಫಾ.ವಿಕ್ಟರ್ ಡಿಸೋಜ ಹಾಗು ಶಾಫಿ ದಾರಿಮಿ ಅಜ್ಜಾವರ ಅವರು ಸೇರಿ ತ್ರಿವರ್ಣದ ಬಲೂನ್ ಹಾರಿಸಿ, ಪಾರಿವಾಳವನ್ನು ಹಾರಿ ಬಿಟ್ಟು ಶುಭ ಹಾರೈಸಿದರು. ತಹಶೀಲ್ದಾರ್ ಅನಿತಾಲಕ್ಷ್ಮಿ, ಮತ್ತಿತರರು ಉಪಸ್ಥಿತಿತರಿದ್ದರು.

Edited By : Nagaraj Tulugeri
PublicNext

PublicNext

29/08/2022 09:30 pm

Cinque Terre

40.19 K

Cinque Terre

0

ಸಂಬಂಧಿತ ಸುದ್ದಿ