ಉತ್ತರ ಪ್ರದೇಶ: ದೇಶಾದ್ಯಂತ ಗಣೇಶೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಗಣೇಶ ಪ್ರತಿಷ್ಠಾಪನೆಗೆ ಕೊನೆ ಹಂತದ ತಯಾರಿ ನಡೆಯುತ್ತಿದೆ. ಅದರಂತೆ ಉತ್ತರ ಪ್ರದೇಶದಲ್ಲಿ ಪ್ರತಿಷ್ಠಾಪನೆಯಾಗಲಿರುವ 'ಸ್ವರ್ಣ ಗಣೇಶʼ ಭಕ್ತರ ಗಮನ ಸೆಳೆಯುತ್ತಿದ್ದಾನೆ.
ಹೌದು, ಹೆಸರೇ ಹೇಳುವಂತೆ ಚಿನ್ನದಿಂದ ತಯಾರಿಸಿದ ಬೃಹತ್ ಗಣೇಶ ಮೂರ್ತಿ ಈಗ ಪ್ರಮುಖ ಆಕರ್ಷಣೆಯಾಗಿದೆ. ಉತ್ತರ ಪ್ರದೇಶದ ಚಾಂಡೌಸಿಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸ್ವರ್ಣ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 18 ಅಡಿ ಎತ್ತರವಿರುವ ಈ ಮೂರ್ತಿಯನ್ನು ಶೇ.40 ರಿಂದ 50ರಷ್ಟು ಚಿನ್ನ ಬಳಸಿ ನಿರ್ಮಿಸಲಾಗುತ್ತಿದೆ. ಉಳಿದದ್ದನ್ನು ಇತರ ಲೋಹದಿಂದ ತಯಾರಿಸಲಾಗುತ್ತಿದೆ. ಇಲ್ಲಿ ಕಳೆದ 52 ವರ್ಷಗಳಿಂದ ಗಣೇಶನ ಶೋಭಾಯಾತ್ರೆ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಸ್ವರ್ಣ ಗಣೇಶ ಶೋಭಾಯಾತ್ರೆಯ ಮೆರಗನ್ನು ಹೆಚ್ಚಿಸಲಿದ್ದಾನೆ.
PublicNext
26/08/2022 04:42 pm