ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ಜಂಗಿನಗಡ್ಡಿ ಗ್ರಾಮದಲ್ಲಿ ಶ್ರೀ ಗದ್ದೆಮ್ಮ ದೇವಿಯ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವು ಕೂಡ 4ನೇ ಶ್ರಾವಣ ಸೋಮವಾರ ಮಾರನೇ ದಿನವಾದ ಮಂಗವಾರದಂದು ನಡೆಯುವ ತೆಪ್ಪೋತ್ಸವ ನೋಡುಗರ ಕಣ್ಮನಸೆಳೆಯುತು.
ಗ್ರಾಮದಲ್ಲಿರೋ ದೇಗುಲದಿಂದ ಕೃಷ್ಣ ನದಿ ತೀರದವರೆಗೆ ಗದ್ದೆಮ್ಮದೇವಿಯ ಪಲಕ್ಕಿ ಮೆರವಣಿಗೆ ನಡೆಸಿ, ಕೃಷ್ಣ ನದಿ ದಡದಲ್ಲಿರುವ ದೇವಿ ಕಟ್ಟೆ ಬಳಿ ಜೋಳದ ಸೊಪ್ಪಿನಿಂದ ತೆಪ್ಪ ತಯಾರಿಸಿ ಹೂವಿನಿಂದ ಅಲಂಕರಿಸಿ ಜತೆಗೆ ದೀಪ ಹಚ್ಚಿ ಕೃಷ್ಣ ನದಿಯಲ್ಲಿ ಬಿಡೋದು ವಿಶೇಷ. ಒಟ್ಟಾರೆ ಗದ್ದೆಮ್ಮ ದೇವಿ ತೆಪ್ಪೋತ್ಸವಕ್ಕೆ ಆಗಮಿಸಿದ ಸುತ್ತಮುತ್ತಲಿನ ಭಕ್ತರು ಹಾಗೂ ಗ್ರಾಮಸ್ಥರು ದೇವಿ ದರ್ಶನ ಪಡೆದು ಪುನೀತರಾದರು.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
23/08/2022 09:35 pm