ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಸತಿಗಾಗಿ ಹುಡುಕುತ್ತಿದ್ದ ಮುಸ್ಲಿಂ ಮಹಿಳೆಯೊಬ್ಬರು ತನ್ನ ಧಾರ್ಮಿಕ ನಂಬಿಕೆಗಳಿಂದಾಗಿ ಮನೆಯ ಮಾಲೀಕರಿಂದ ತಿರಸ್ಕರಿಸಲ್ಪಟ್ಟಿದ್ದಾಳೆ. ಈ ಸಂಬಂಧ ಸಂತ್ರಸ್ತ ಮಹಿಳೆ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಬೆಂಗಳೂರಿನ ಹೈಫಾ ಮುಸ್ಲಿಂ ಮಹಿಳೆಯೇ ಬಾಡಿಗೆಗೆ ಮನೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡ ಮಹಿಳೆ. ಎಲ್ಲರೂ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಿದರೆ, ನನ್ನ ಆಗಸ್ಟ್ 15 ಅನ್ನು ನಾನು ಹೇಗೆ ಕಳೆದಿದ್ದೇನೆ ಎಂಬುದು ಇಲ್ಲಿದೆ ಎಂದು ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ.
ಹೈಫಾ ಮನೆ ಹುಡುಕಾಟದಲ್ಲಿದ್ದರು. ಮನೆ ಬಾಡಿಗೆಗೆ ಇದೆ ಎಂದು ಹಾಕಲಾದ ಮೊಬೈಲ್ ನಂಬರ್ಗಳನ್ನು ಆಕೆ ಸಂಪರ್ಕಿಸಿದ್ದಾಳೆ. ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡಿ ಮನೆ ಬಾಡಿಗೆಗೆ ಲಭ್ಯವಿದೆಯೇ ಎಂದು ವಿಚಾರಿಸಿದ್ದಾರೆ. ಆಗ ಮನೆ ಮಾಲೀಕರು ಮಹಿಳೆಯ ಹೆಸರು ಕೇಳಿದ್ದಾರೆ. ಆಗ ತನ್ನ ಹೆಸರು ಹೈಫಾ ಎಂದು ಹೇಳಿದ್ದಾಳೆ. "ನೀವು ಮುಸ್ಲಿಂ ಮಹಿಳೆಯೇ?" ಎಂದು ಮನೆ ಮಾಲೀಕರು ಪ್ರಶ್ನಿಸಿದ್ದಾರೆ? "ಹೌದು" ಎಂದಿದ್ದಾರೆ ಹೈಫಾ.
"ಇದರಿಂದ ಏನಾದರೂ ಸಮಸ್ಯೆ ಇದೆಯೇ? ನನಗೆ ಮನೆ ಸಿಗುವುದಿಲ್ಲವೇ?" ಎಂದು ಸಹ ಹೈಫಾ ಪ್ರಶ್ನಿಸಿದ್ದಾರೆ. ಆಗ ಮನೆ ಮಾಲೀಕರು "ಹೌದು, ಸಮಸ್ಯೆ ಇದೆ. ಹಿಂದೂ ಕುಟುಂಬಕ್ಕೆ ಮಾತ್ರ ಮನೆ ಬಾಡಿಗೆಗೆ ಕೊಡುತ್ತೇವೆ" ಎಂದು ಹೇಳಿದ್ದಾರೆ.
PublicNext
19/08/2022 01:42 pm