ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ದೇವರಿಗೆ ಪೇರಲ ಹಣ್ಣು ತಿಕ್ಕುವ ವಿಶಿಷ್ಠ ಜಾತ್ರೆ: ಕಪ್ಪತ್ತಮಲ್ಲಯ್ಯನ ಜಾತ್ರೆಯಲ್ಲಿ ಗಾಳಿಗುಂಡಿ ಬಸವಣ್ಣನ ವೈಶಿಷ್ಟ್ಯತೆ

ಗದಗ: ಜಾತ್ರೆ ಎಂದಾಕ್ಷಣ ಬೆಂಡು ಬೆತ್ತಾಸು, ಕಬ್ಬು, ಉತ್ತತ್ತಿ, ಬಾಳೆಹಣ್ಣು ಎಸೆದು ತೇರು ಎಳೆದು ಸಂಭ್ರಮಿಸುತ್ತಾರೆ. ಆದ್ರೆ ಗದಗ ಜಿಲ್ಲೆಯ ಕಪ್ಪತಗಿರಿಯಲ್ಲಿ ನಡೆಯುವ ಜಾತ್ರೆಯಲ್ಲಿ ದೇವರಿಗೆ ಪೇರಲ ಹಣ್ಣು ತಿಕ್ಕುವುದೆ ಒಂದು ವೈಶಿಷ್ಟತೆ.

ಈ ಜಾತ್ರೆ ನೋಡುಗರಿಗೆಲ್ಲರಿಗೂ ಒಂದು ರೀತಿ ಆಶ್ಚರ್ಯ ಮೂಡಿಸುತ್ತೆ. ಇಂಥಹ ಜಾತ್ರೆ ಕಂಡು ಬರೋದು, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿಯ ಕಪ್ಪತ್ತಗುಡ್ಡದ ಗಾಳಿಗುಂಡಿ ಬಸವೇಶ್ವರ ಸನ್ನಿಧಾನದಲ್ಲಿ. ಶ್ರಾವಣ ಮಾಸದ 3ನೇ ಗುರುವಾರ ಈ ಜಾತ್ರೆ ವೈಭವದಿಂದ ನಡೆಯುತ್ತೆ. ಪಾಪ, ಕರ್ಮಗಳು, ದುಷ್ಟ ಶಕ್ತಿಗಳು ದೂರವಾಗಲೆಂದು ಬಸವಣ್ಣನಿಗೆ ಪೇರಲ ಹಣ್ಣು ತಿಕ್ಕುತ್ತಾರೆ. ಇದು ಬೇಡಿದ ವರಗಳನ್ನ ನೀಡುವ ದೇವರಾಗಿರುವುದರಿಂದ, ಇಲ್ಲಿಗೆ ಭಕ್ತಿಯಿಂದ ಬೇಡಿಕೊಂಡ್ರೆ ಮುಕ್ತಿ ಸಿಗುತ್ತೆ ಅನ್ನೋದು ಭಕ್ತರ ನಂಬಿಕೆ.

ಇನ್ನು ಈ ದೇವರು, ಬೆಟ್ಟದ ಮೇಲಿದ್ರೂ ಡೋಣಿ ಗ್ರಾಮ, ಗದಗ ಜಿಲ್ಲೆ ಅಷ್ಟೇ ಅಲ್ಲದೇ, ಕೊಪ್ಪಳ, ಹಾವೇರಿ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಯ ಭಕ್ತರು ಈ ಜಾತ್ರೆಗೆ ಬರ್ತಾರೆ. ಇಲ್ಲಿ ಮದುವೆ ಆಗದವರು ಕಂಕಣ ಕಟ್ಟಿದ್ರೆ ಮದುವೆಯಾಗುತ್ತೆ. ಮಕ್ಕಳಾಗದವರು ತೊಟ್ಟಿಲು ಕಟ್ಟಿದ್ರೆ ಮಕ್ಕಳಾಗುತ್ತವೆ. ಮನೆ ಬೇಕಾದವರು ಕಲ್ಲಿನ ಮನೆ ನಿರ್ಮಿಸಿದ್ರೆ ಮನೆ ನಿರ್ಮಿಸುವಷ್ಟು ಅವರು ಸಬಲರಾಗಲಿದ್ದಾರೆ ಎಂಬ ನಂಬಿಕೆ ಈ ಜನರದ್ದು. ಹೀಗಾಗಿ ಈ‌ ಜಾತ್ರೆಗೆ ಹರಕೆ ಜಾತ್ರೆ ಅಂತಾನೂ ಪ್ರತೀತಿ ಇದೆ.

ಒಟ್ಟಾರೆ ಆಧುನಿಕತೆ ಇಷ್ಟೆಲ್ಲಾ ಮುಂದುವರೆದಿದ್ದರೂ, ಆಧುನಿಕ ಯುಗದಲ್ಲಿ ದೇವರ ಮೇಲಿನ ನಂಬಿಕೆಗಳು ಆಚರಣೆಗಳು ಮಾತ್ರ ಕಡಿಮೆ ಆಗ್ತಿಲ್ಲ ಅನ್ನೋದಕ್ಕೆ ಈ ಜಾತ್ರೆಯೇ ಸಾಕ್ಷಿ.

Edited By :
PublicNext

PublicNext

18/08/2022 10:44 pm

Cinque Terre

38.69 K

Cinque Terre

0

ಸಂಬಂಧಿತ ಸುದ್ದಿ