ರಾಮನಗರ: ಸನ್ಯಾಸತ್ವ ಸ್ವೀಕರಿಸಿ ಮಠಾದಿಪತಿಯಾಗಿ ಎರಡು ವರ್ಷದ ಹಿಂದೆ ಪಟ್ಟಾಭಿಷೇಕ ಸ್ವೀಕರಿಸಿದ್ದ ಸ್ವಾಮೀಜಿ ಕಣ್ಮರೆಯ ಹಿಂದೆ ಹಲವು ಅನುಮಾನಮೂಡಿದೆ.
ಮಾಗಡಿ ತಾಲೂಕು ಸೋಲೂರಿನ ಗದ್ದುಗೆ ಮಠದ ಶಿವಮಹಂತಸ್ವಾಮಿ@ ಹರೀಶ್ ರಾತ್ರೋರಾತ್ರಿ ಮಠದಿಂದ ಕಾಣೆಯಾಗಿದ್ದಾರೆ. ಮಠದಲ್ಲಿ ನನಗೆ ಸನ್ಯಾಸತ್ವ ಇಷ್ಟ ಇಲ್ಲ. ಮಠ ಬಿಟ್ಟು ನಾನ್ ಹೋಗ್ತಿದ್ದೇನೆ, ನಾನು ಯಾರ ಕೈಗೂ ಸಿಗೋದಿಲ್ಲ ನನ್ನನ್ನ ಹುಡುಕುವ ಪ್ರಯತ್ನ ಮಾಡಬೇಡಿ ಅಂತ ಶಿವಮಹಂತಸ್ವಾಮಿ ಪತ್ರ ಬರೆದಿಟ್ಟು ಮಠ ಬಿಟ್ಟು ಪರಾರಿಯಾಗಿದ್ದಾರೆ.
ಇನ್ನೂ ಮೂಲ ಹರೀಶ್ ಆಗಿದ್ದ ಇವ್ರು ಸನ್ಯಾಸತ್ವ ಸ್ವೀಕರಿಸಿದ ನಂತರ ಶಿವಮಹಂತಸ್ವಾಮಿಯಾಗಿ ದೀಕ್ಷೆ ಪಡೆಸಿದ್ರು. ಮಠದಲ್ಲಿ ಓದುವಾಗ ಯುವತಿಯೊಂದಿಗೆ ಪ್ರೇಮಾಂಕುರವಾಗಿ ಸದ್ಯ ಅದೇ ಹುಡುಗಿ ಜೋತೆ ಸ್ವಾಮಿಜೀ ಹೋಗಿದ್ದಾರೆ ಎನ್ನಲಾಗ್ತಿದೆ. ಇನ್ನೂ ಆ ಯುವತಿಗೂ ಕಳೆದ ಒಂದುವರೆ ತಿಂಗಳ ಹಿಂದೆ ಮದುವೆಯಾಗಿದ್ದು ಸ್ವಾಮೀಜಿ ಜೊತೆ ಹೊಗಿರುವ ಶಂಕೆ ವ್ಯಕ್ತವಾಗಿದ್ದು ಕೂದುರು ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದೆ.
PublicNext
13/08/2022 11:26 pm