ಯಾದಗಿರಿ : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಿಹಾಳ ಗ್ರಾಮದಲ್ಲಿ ಮೊಹರಂ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲಾಯಿತು.
ಇಂದು ಮೊಹರಂ ಕೊನೆಯ ದಿನದ ದಪನ್ ಹಬ್ಬವನ್ನ ಗ್ರಾಮದ ಯುವಕರು ಹಾಗೂ ಹಿರಿಯರು ದೇವರಿಗೆ ಹೂವಿನ ಹಾರ ಹಾಕುವ ಮೂಲಕ ಪೂಜೆ ಮಾಡಿ ಪುನೀತರಾದರು.
ಇನ್ನು ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ನಡೆಸಿಕೊಂಡ ಬಂದ ಮೊಹರಂ ಹಬ್ಬದಲ್ಲಿ ತಮಟೆ ಸದ್ದಿಗೆ ವಿವಿಧ ರೀತಿಯ ಹೆಜ್ಜೆಗಳನ್ನು ಹಾಕಿ ಜನ ಖುಷಿಪಟ್ಟರು. ಅಲಯ ಪೀರಗಳಾದ ಕಾಸಿಂಸಾಬ್, ಅಯ್ಯಪ್ಪ ಪೂಜಾರಿ, ಬಸಣ್ಣ ಅಮ್ಮಾಪುರ, ದೇವಣ್ಣಗೌಡ ಹಾಗೂ ಮಡಿವಾಳಪ್ಪ ಅವರು ದೇವರಗಳು ಹಿಡಿದಿದ್ದರು.
ಒಟ್ಟಾರೆ ಮೊಹರಂ ಹಬ್ಬದ ದಪನ್ ಕಾರ್ಯಕ್ರಮವನ್ನ ಗ್ರಾಮಸ್ಥರು ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸಿದರು.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
09/08/2022 08:01 pm