ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂತ್ರಾಲಯ ರಾಯರ ಮಠದಲ್ಲಿ ಒಂದೇ ತಿಂಗಳಲ್ಲಿ 1.97 ಕೋಟಿ ರೂ. ಕಾಣಿಕೆ ಸಂಗ್ರಹ

ರಾಯಚೂರು: ರಾಯಚೂರಿಗೆ ಹತ್ತಿರದ ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ ಭಕ್ತರಿಂದ ಸಮರ್ಪಣೆಯಾದ ಕಾಣಿಕೆಗಳ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಮಠದ ಮೂಲದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕಳೆದ ಒಂದು ತಿಂಗಳಿಂದ ಒಟ್ಟು 1 ಕೋಟಿ 97 ಲಕ್ಷದ 21 ಸಾವಿರದ 825 ರೂಪಾಯಿ ಸಂಗ್ರಹವಾಗಿದೆ.

ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಜುಲೈ ತಿಂಗಳು, ಸಂಗ್ರಹವಾದ ಕಾಣಿಕೆಯಲ್ಲಿ 4 ಲಕ್ಷದ 4 ಸಾವಿರದ 59 ರೂಪಾಯಿ ನಾಣ್ಯಗಳು ಹಾಗೂ 1 ಕೋಟಿ 93 ಲಕ್ಷದ 17 ಸಾವಿರದ 766 ರೂಪಾಯಿ ನೋಟುಗಳು ಸಂಗ್ರಹವಾಗಿದೆ. 16 ಗ್ರಾಂ ಬಂಗಾರ, 745 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯದ ಕುರಿತು ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

30/07/2022 02:46 pm

Cinque Terre

34.1 K

Cinque Terre

0

ಸಂಬಂಧಿತ ಸುದ್ದಿ