ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಕಾಳಿ ಮಾತೆಗೆ ಅವಮಾನ ಮಾಡಿದ್ರೆ ಸಹಿಸೋಲ್ಲ: 40ಕ್ಕೂ ಹೆಚ್ಚು ಶ್ರೀಗಳ ಗುಡುಗು..!

ದಾವಣಗೆರೆ: ವಿಶ್ವಕರ್ಮ ಸಮಾಜದ ಆರಾಧ್ಯ ದೈವ ಕಾಳಿಕಾದೇವಿಗೆ ಅಪಚಾರ ಮಾಡಲಾಗಿದೆ. ಈ ಕೃತ್ಯದಿಂದ ಜಗತ್ತಿನಾದ್ಯಂತ ಕಾಳಿಕಾದೇವಿ ಆರಾಧಕರಿಗೆ ನೋವಾಗಿದೆ. ಈ ನಿಟ್ಟಿನಲ್ಲಿ ಇಂದು ಕಾಳಿಕಾದೇವಿ ವಿಕೃತ ರೂಪ ನೀಡಿದವರಿಗೆ ಧಿಕ್ಕಾರ ಹಾಕುತ್ತೇವೆ. ವಿಶ್ವಕರ್ಮ ಮಠಾಧೀಶರಷ್ಟೇ ಅಲ್ಲ ಸನಾತನ ಧರ್ಮದ ಮಠಾಧಿಪತಿಗಳು, ಗುರುಹಿರಿಯರು ಖಂಡಿಸುತ್ತೇವೆ. ಮುಂದಿನ ಹೋರಾಟದ ಬಗ್ಗೆ ಯೋಜನೆ ರೂಪಿಸಿದ್ದೇವೆ ಎಂದು ಹಾಸನ ಜಿಲ್ಲೆ ಅರೆಮಾದನಹಳ್ಳಿ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ವಿಶ್ವ ಕರ್ಮ ಸಮಾಜದ ಸಮಾವೇಶದ ಪ್ರಯುಕ್ತ ಸುಮಾರು 40ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಜಯದೇವ ವೃತ್ತದಲ್ಲಿ ಏರ್ಪಡಿಸಿದ್ದ ಪಾದಯಾತ್ರೆಯ ಉದ್ಘಾಟನೆ ವೇಳೆ ಮಾತನಾಡಿದ ಅವರು, ಕಾಳಿಕಾ ಮಾತೆಗೆ ಅವಮಾನ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ದೇಶದ ಸನಾನತನ ಪರಂಪರೆಯಲ್ಲಿ ಆದಿಶಕ್ತಿಯಾದ ಕಾಳಿಕಾದೇವಿಗೆ ಹಿರಿದಾದ ಮಹತ್ವವಿದೆ. ಅಂತಹ ದೇವಿಯನ್ನು ಇಂದು ಪ್ರತ್ಯೇಕವಾಗಿ ವಿಕೃತ ರೂಪದಲ್ಲಿ ಪ್ರದರ್ಶನ ನೀಡಿರುವುದು ಖಂಡನೀಯ ಎಂದರು.

ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ವಿಶ್ವಕರ್ಮ ಸಮಾಜದ ಮಠಾಧಿಪತಿಗಳ ಒಕ್ಕೂಟದಿಂದ ಖಂಡಿಸಿ, ಮುಂದಿನ ನಿರ್ಣಯ ಕೈಗೊಳ್ಳಲಾಗುವುದು. ಹಿಂದೂ ದೇವರಿಗೆ ಅಪಚಾರ ಮಾಡದರೆ ಸಹಿಸಲಾಗದು. ಕಾಳಿಕಾ ದೇವಿಗೆ ಅಪಮಾನ ಮಾಡಿದವರು ಈ ಕೂಡಲೇ ಕ್ಷಮಾಪಣೆ ಕೇಳಬೇಕು.‌ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಸಂಘಟನೆಯ ಶಕ್ತಿ ನಮ್ಮಲ್ಲಿದೆ ಎಂದರು.

Edited By : Manjunath H D
PublicNext

PublicNext

11/07/2022 07:26 pm

Cinque Terre

38.04 K

Cinque Terre

1