ಬೆಳಗಾವಿ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರ ಸವದತ್ತಿ ಯಲ್ಲಮ್ಮ ಕ್ಷೇತ್ರ. ಕೋವಿಡ್ ವೇಳೆ ಇಡೀ ವರ್ಷ ಲಾಕ್ ಆಗಿದ್ದ ದೇಗುಲ ಇದೀಗ ಮತ್ತೆ ಓಪನ್ ಆಗಿದೆ. ಪರಿಣಾಮ ಭಕ್ತರ ದಂಡೇ ದೇಗುಲಕ್ಕೆ ಹರಿದು ಬರುತ್ತಿದ್ದು, ಮೂರೇ ತಿಂಗಳಲ್ಲಿ 2.15 ಕೋಟಿ ದೇಣಿಗೆ ಸಂಗ್ರಹವಾಗಿದೆ.
ಏಪ್ರಿಲ್ 1ರಿಂದ ಜೂನ್ 30ರವರೆಗೆ ದೇಣಿಗೆ ಏಣಿಕೆ ಮಾಡಲಾಯಿತು. ಯಲ್ಲಮ್ಮನ ಗುಡ್ಡದಲ್ಲಿ ಸೋಮವಾರ ಆರಂಭವಾದ ಎರಡನೇ ಹಂತದ ಹುಂಡಿ ಎಣಿಕೆ ನಸುಕಿನ ಜಾವದ ವೇಳೆಗೆ ಮುಗಿಯಿತು. ಉಧೋ ಯಲ್ಲಮ್ಮ ಎಂದರೆ ಕಷ್ಟ ಕಳೆಯುವ ಯಲ್ಲಮ್ಮ ದೇವಿಯ ಹುಂಡಿಗೆ ಭಕ್ತರು ತಮ್ಮ ಕೈಲಾದ ಹಣ, ಬೆಳ್ಳಿ, ಬಂಗಾರವನ್ನು ಹಾಕಿ ಭಕ್ತಿ ಮೆರೆದಿದ್ದಾರೆ.
ಯಲ್ಲಮ್ಮ ದೇವಿ ದೇಗುಲದ ಕಾಣಿಕೆ ಹುಂಡಿಯಲ್ಲಿ 33.44 ಲಕ್ಷ ನಗದು, 5.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 62,390 ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ. ತಮ್ಮ ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ದೇವಿಗೆ ಹಣ, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವುದು ರೂಢಿ.
PublicNext
09/07/2022 07:32 am