ಭಂಡಾರದೊಡೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಕಾರಣಿಕವನ್ನು ನುಡಿಯುವ ಗೊರವಯ್ಯ ವಂಶಪಾರಂಪರ್ಯವಾಗಿ ಹಾಲುಮತ ಕುಟುಂಬಕ್ಕೆ ಸೇರಿರಬೇಕು. ಪಶುಪಾಲನೆಯ ಕುರುಬನಾಗಿ ಜನಿಸಿ ಪಶುಗಳ್ಳರಾದ ಮಣಿ ಹಾಗೂ ಮಲ್ಲರನ್ನು ಸಂಹಾರಮಾಡಿದ ಎಂಬುದು ನಂಬಿಕೆ. ಸಾಕ್ಷತ್ ಪರಶಿವನಾದ ಶ್ರೀ ಮೈಲಾರಲಿಂಗೇಶ್ವರ ಹಾಲುಮತದ ಗೊರವನ ಬಾಯಿಂದ ಕಾರಣಿಕ ನುಡಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
ಮೈಲಾರ ಲಿಂಗನ ಕ್ಷೇತ್ರಗಳು ದಕ್ಷಿಣ ಭಾರತದಲ್ಲಿ ಅನೇಕ ಇವೆ. ಅದರಲ್ಲೂ ಕರ್ನಾಟಕದಲ್ಲಿ ಹೇರಳ. ಹಾವೇರಿ ಜಿಲ್ಲೆಯ ದೇವರಗುಡ್ಡ (ಹಿರಿಯ ಮೈಲಾರ), ದೇವಿ ಹೊಸೂರು. ಬೀದರ್ ಜಿಲ್ಲೆಯ ಮೈಲಾರಪುರ, ಬಳ್ಳಾರಿ ಜಿಲ್ಲೆಯ ಮಣ್ಣು ಮೈಲಾರ, ಬೆಳಗಾವಿ ಜಿಲ್ಲೆಯ ಕಾರಿಮನಿ, ಮಂಗಸೂಳಿ, ಶಿವಮೊಗ್ಗ ಜಿಲ್ಲೆಯ ಕುಬಟೂರು. ಮೈಸೂರು ಜಿಲ್ಲೆಯ ಮುಡುಕುತೊರೆ, ಬೆಂಗಳೂರು ಜಿಲ್ಲೆಯ ಹೆನ್ನಾಗರಗ್ರಾಮ, ಮಂಡ್ಯ ಜಿಲ್ಲೆಯ ಮೈಲಾರಪಟ್ಟಣ- ಮುಂತಾದ ಕಡೆ ಮೈಲಾರ ಲಿಂಗನ ಕ್ಷೇತ್ರಗಳನ್ನು ನೋಡಬಹುದಾಗಿದೆ. ಇವುಗಳಲ್ಲಿ ದೇವರಗುಡ್ಡ ಕ್ಷೇತ್ರವೇ ಮುಖ್ಯವಾದುದು.
PublicNext
03/07/2022 07:00 am