ಚಾಮರಾಜನಗರ: ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಎರಡು ಕೋಟಿ ರೂಪಾಯಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಕಾರ್ಯ ನಡೆದು ಕಳೆದ 35 ದಿನಗಳ ಅವಧಿಯಲ್ಲಿ 2,03,25,354 ಕೋಟಿ ರೂ. ನಗದು ಸಂಗ್ರಹವಾಗಿದೆ. ಈ ಪೈಕಿ ನಾಣ್ಯಗಳ ರೂಪದಲ್ಲೇ 12 ಲಕ್ಷ ರೂ. ಕಾಣಿಕೆಯಾಗಿ ಬಂದಿರುವುದು ವಿಶೇಷವಾಗಿದೆ. ನಗದು ಹಣದ ಜೊತೆಗೆ 110 ಗ್ರಾಂ ಚಿನ್ನ, 3.560 ಕೆಜಿ ಬೆಳ್ಳಿಯನ್ನು ಸಹ ಭಕ್ತರು ಮಹದೇಶ್ವರನಿಗೆ ಅರ್ಪಿಸಿದ್ದಾರೆ.
PublicNext
19/06/2022 05:09 pm