ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸವಣ್ಣನವರ ಮೂಲ ಅನುಭವ ಮಂಟಪದ ಮೇಲೆ ನವಾಬರಿಂದ ದರ್ಗಾ ನಿರ್ಮಾಣ?

ಬಸವ ಕಲ್ಯಾಣ : ಕಾಶಿ ಜ್ಞಾನವ್ಯಾಪಿ ಮಸೀದಿ ವಿವಾದ ಈಗ ಕರ್ನಾಟದ ಮಂಡ್ಯ,ಮಂಗಳೂರಿನ ಮಳಲಿ ನಂತರ ಈಗ ಬೀದರ್ ಜಿಲ್ಲೆ ಬಸವ ಕಲ್ಯಾಣಕ್ಕೂ ಹಬ್ಬಿದೆ.

೧೨ ನೇ ಶತಮಾನದಲ್ಲಿ ಬಸವಣ್ಣವರು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿದ್ರು.ತದನಂತರ ಆಡಳಿತಕ್ಕೆ ಬಂದ ನವಾಬರು ಈ ಜಾಗದಲ್ಲಿಯೇ ಪೀರ್ ಪಾಶಾ ದರ್ಗಾ ನಿರ್ಮಾಣ ಮಾಡಿರುವ ಸಾಧ್ಯತೆಗಳಿವೆ ಎಂದು ಬಸವ ಭಕ್ತರು ಹೇಳುತ್ತಿದ್ದಾರೆ.

ಅಲ್ಲಿರುವ ದರ್ಗಾವೊಂದು ಈ ಮೊದಲು ಐತಿಹಾಸಿಕವಾಗಿ ದೇವಾಲಯವಾಗಿತ್ತು ಎಂಬುದಕ್ಕೆ ಸ್ಪಷ್ಟ ಪುರಾವೆಗಳಿವೆ ಎಂದು ಪ್ರತಿಪಾದಿಸಿರುವ ಹಿಂದೂ ಸಂಘಟನೆ, ವಿವಾದದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಬಸವಣ್ಣನವರ ಅನುಯಾಯಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದೆ.

ಕಾರ್ಯಕರ್ತರ ಪ್ರಕಾರ, ಈ ಸ್ಥಳದಲ್ಲಿ ದೇವಾಲಯವಿತ್ತು ಮತ್ತು ನಂತರ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಿಸಲಾಯಿತು ಎಂದು ತೋರಿಸಲು ಐತಿಹಾಸಿಕ ಪುರಾವೆಗಳಿವೆ. ಈ ಬಗ್ಗೆ ಪುರಾತತ್ವ ಇಲಾಖೆ ತನಿಖೆ ನಡೆಸುವಂತೆ ಒತ್ತಾಯಿಸಿ ಕಾರ್ಯಕರ್ತರು ಮಸೀದಿ ಆವರಣದಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ.

ಪರ್ಷಿಯಾ ರಾಜ ಖಲೀಫ್ ಗೆ ಟಿಪ್ಪು ಸುಲ್ತಾನ್ ಬರೆದ ಪತ್ರದಲ್ಲಿ ಇಲ್ಲಿದ್ದ ದೇವಸ್ಥಾನದ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ಹೇಳಲಾಗುತ್ತಿದೆ. ಪುರಾತತ್ವ ಇಲಾಖೆಯು ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Edited By : Manjunath H D
PublicNext

PublicNext

28/05/2022 10:41 pm

Cinque Terre

133.86 K

Cinque Terre

8