ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಜಲಾಪುರ ಗ್ರಾಮದಲ್ಲಿಂದು ಭೂಮಣ್ಣ ಮುತ್ಯಾನ ಜಾತ್ರೆ ಸಡಗರದಿಂದ ನಡೆಯಿತು. ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಭಕ್ತಿಯಿಂದ ಸಾಮೂಹಿಕವಾಗಿ ದೀಡ ನಮಸ್ಕಾರ ಹಾಕಿ ದೇವರಿಗೆ ಪೂಜೆ ಸಲ್ಲಿಸಿದರು.
ಭೂಮಣ್ಣ ಮುತ್ಯಾನ ದೇವಸ್ಥಾನ ಬಳಿ ಜೋಗಮ್ಮಂದಿರು ಕಳಸದ ಮೇಲೆ ನೀರು ತುಂಬಿದ ಬಿಂದಿಗೆ ಒತ್ತು ಸಾಂಪ್ರದಾಯಿಕ ಕಲೆ ಪ್ರದರ್ಶಿಸಿದ್ದು, ಜನರು ಕಣ್ತುಂಬಿಕೊಂಡರು. ಇನ್ನು ಜಾತ್ರೆಗೆ ಬಂದ ಭಕ್ತರು ದೇವರಿಗೆ ತೆಂಗಿನ ಕಾಯಿ ಒಡೆದು ಭೂಮಣ್ಣ ಮುತ್ಯಾನ ದರ್ಶನ ಪಡೆದು ಪುನೀತರಾದರು.
ವರದಿ: ಮೌನೇಶ ಬಿ. ಮಂಗಿ ಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
22/05/2022 06:09 pm