ಪಬ್ಲಿಕ್ ನೆಕ್ಸ್ಟ್ ಪಂಚ್ : ಕೇಶವ ನಾಡಕರ್ಣಿ
ಹಲೋ...ಅಸಾದುದ್ದೀನ ಓವೈಸಿ ಅವರೆ, ಮತ್ತೊಂದು ಮಸೀದಿ ಕಳೆದುಕೊಳ್ಳಲು ಇಷ್ಟವಿಲ್ಲ ಎನ್ನುತ್ತೀರಲ್ಲಾ ಅದು ನಿಮ್ಮದೇ ಅಲ್ಲದಿರುವಾಗ ಕಳೆದುಕೊಳ್ಳುವುದೇನು ಬಂತು? ಅಲ್ಲಿ ಒಳಗಡೆ ದೇವಾಸ್ಥಾವಿರುವುದನ್ನು ಕೋರ್ಟ್ ಖಚಿತಪಡಿಸಿಕೊಳ್ಳುತ್ತಿದೆ ಅಷ್ಟೆ.
ಅಯೋಧ್ಯೆ ಬಾಬರಿ ಮಸೀದಿ ಕಳೆದುಕೊಂಡಿದ್ದೇವೆ ಈಗ ವಾರಣಾಸಿ ಜ್ಞಾನವ್ಯಾಪಿ ಕಳೆದುಕೊಳ್ಳುವುದಿಲ್ಲ ಸಿದ್ದರಿಲ್ಲ ಎಂಬುದು ಓವೈಸಿ ಅವರ ಅಳಲು . ಅದು ಅಯೋಧ್ಯೆಲ್ಲಿದ್ದದ್ದು ಮೂಲ ಬಾಬರಿ ಮಸೀದಿ ಅಲ್ಲ, ರಾಮ ಜನ್ಮಭೂಮಿ ಎಂದು ತೀರ್ಮಾನವಾಗಿ ಅಲ್ಲಿ ರಾಮಮಂದಿರ ನಿರ್ಮಾಣವೂ ಆಗುತ್ತಿದೆ.
ನಿಮ್ಮ ವಂಶಜನೆ ಅಲ್ಲದ ಮೊಘಲ್ ದಾಳಿಕೋರ, ಆಕ್ರಣಕಾರ,, ಅತ್ಯಾಚಾರಿ ಬಾಬರ್ ಭಾರತದ ದೇವಸ್ಥಾನಗಳನ್ನು ನುಚ್ಚು ನೂರು ಮಾಡಿ ಕಟ್ಟಿಸಿದ ವಿವಾದಿತ ಕಟ್ಟಡಗಳಲ್ಲಿ ಇವು ಕೆಲವೇ ಕೆಲವು. ಅದಕ್ಕೆ ಅಯೋಧ್ಯೆ ರಾಮ ಜನ್ಮಭೂಮಿ ನಂತರ ಈಗ ಕಾಶಿ ಜ್ಞಾನವ್ಯಾಪಿ ಸಾಕ್ಷಿ.
ಕಾಶಿ ವಿಶ್ವನಾಥ ದೇವಾಲಯ ಆಕ್ರಮಿಸಿಕೊಂಡು ಕಟ್ಟಿರುವ ವಿವಾದಿತ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ದೇವಾಲಯ ನೀವು ಕಟ್ಟಿಸಿಕೊಂಡಿರಾ? ಮಸೀದಿಯೊಳಗೆ ನಂದಿ, ಹನುಮಾನ್ ವಿಗ್ರಹಗಳನ್ನು ಸ್ಥಾಪಿಸಿಕೊಂಡಿರಾ? ಹಾಗಾದರೆ ಅವು ಎಲ್ಲಿಂದ ಬಂದವು? ಬಿಡಿ ಈ ನಾಟಕ.
ಜ್ಞಾನವ್ಯಾಪಿ ಮಸೀದಿಯಲ್ಲಿ ದೇವಸ್ಥಾನವಿದೆ ಎಂಬುದಕ್ಕೆ ಲಂಡನ್ ವಸ್ತು ಸಂಗ್ರಹಾಲಯದಲ್ಲಿರುವ ಫೋಟೊ ನೋಡಿ.
ಇನ್ನು 1991 ರ ಧಾರ್ಮಿಕ ಸ್ವರೂಪಗಳ ರಕ್ಷಣೆ ಕಾಯ್ದೆ ಬೆದರಿಕೆ ಹಾಕುತ್ತಿದ್ದೀರಾ? ಆ ಕಾಯ್ದಯೆನ್ನು ತಂದವರು ಯಾರು? ನಿಮ್ಮನ್ನು ಸಾಕಿ ಸಲಹುತ್ತಿರುವ ಕಾಂಗ್ರೆಸ್ ಪಕ್ಷ. ಅಂದು ಪ್ರಧಾನಿ ಆಗಿದ್ದ ಪಿ.ವಿ ನರಸಿಂಹರಾವ್ ಈ ಹಿಂದೂ ವಿರೋಧಿ ಕಾನೂನು ಜಾರಿಗೊಳಿಸಿದ್ದರು ಎಂಬುದನ್ನು ದೇಶದ ಜನತೆ ಮರೆತಿಲ್ಲ.
ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಗೌರವಿಸದ ನಿಮಗೆ ಈಗ ಕೋರ್ಟು,ಕಾನೂನಿನ ಬಗ್ಗೆ ಈಗ ನೆನಪಾಯಿತೆ? ಅಷ್ಟು ಗೌರವಿದ್ದರೆ ಹಿಜಾಬ್ ತೀರ್ಪನ್ನು ವಿರೋಧಿಸುತ್ತಿರುವ ಪ್ರತಿಭಟಿಸುತ್ತಿರುವ ನಿಮ್ಮ ನಾಯಕರಿಗೆ ಬುದ್ಧಿ ಹೇಳಿ.
ಅಲ್ಲಿ ಸಧ್ಯ ಸಮೀಕ್ಷೆ ನಡೆದಿದೆ. ಅದರ ಫಲಿತಾಂಶ ಬಂದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಏನು ಮಾಡುತ್ತಾರೆ ಕಾದು ನೋಡಿ. ಆಗ ಎಷ್ಟು ಬೇಕಾದರೂ ಎಫ್ಐಆರ್ ದಾಖಲಿಸಿ.
PublicNext
13/05/2022 01:35 pm