ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದೇಶಕ್ಕೆ ಹಾರಿದ ಅಲ್ಲಾಹು ಅಕ್ಬರ್ ಕೂಗಿದ ಮುಸ್ಕಾನ್ : ತನಿಖೆಗೆ ಒತ್ತಾಯ

ಮಂಡ್ಯ: ರಾಜ್ಯದಲ್ಲಿ ಉಂಟಾದ ಹಿಜಾಬ್ ವಿವಾದ ಸಂದರ್ಭದಲ್ಲಿ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ‘ಅಲ್ಲಾಹು ಅಕ್ಬರ್’ ಎಂದು ಕೂಗಿ ಸಾಕಷ್ಟು ಮುನ್ನಲೆಗೆ ಬಂದಿದ್ದಳು. ಸದ್ಯ ಈ ವಿದ್ಯಾರ್ಥಿನಿ ವಿದ್ಯಾರ್ಥಿನಿ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ಹಾರಿದ್ದಾರೆ. ಹೌದು ವಿದ್ಯಾರ್ಥಿನಿ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸೌದಿ ಪ್ರವಾಸಕ್ಕೆ ಹೊರಟಿದೆ.

ಈ ಪ್ರವಾಸದ ಹಿಂದೆ ಏನಾದರೂ ಇದ್ಯಾ ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದೆ. ಈ ಹಿಂದೆ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿ ಭಾರೀ ಸುದ್ದಿಯಾಗಿದ್ದರು. ಈ ಹೇಳಿಕೆ ಹಿನ್ನೆಲೆ ಉಗ್ರ ಸಂಘಟನೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಈ ವೇಳೆ ಮುಸ್ಕಾನ್ ವಿದೇಶಿ ಪ್ರವಾಸ ಕೈಗೊಂಡಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.

ಅಲ್ ಖೈದಾ ಸಂಘಟನೆ ಮುಸ್ಕಾನ್ ಹೊಗಳಿ ಗುಣಗಾನ ಮಾಡಿತ್ತು. ಇದರಿಂದ ಮುಸ್ಕಾನ್ ಬಗ್ಗೆ ಹೆಚ್ಚು ತನಿಖೆ ಮಾಡುವಂತೆ ಆಗ್ರಹ ಮಾಡಲಾಗಿತ್ತು. ಪರಿಣಾಮ ಪೊಲೀಸ್ ಇಲಾಖೆ ಮುಸ್ಕಾನ್ ಮತ್ತು ಕುಟುಂಬದವರನ್ನು ವಿಚಾರಣೆ ನಡೆಸಿತ್ತು. ಆ ಕುಟುಂಬದ ಮೇಲೆ ಹದ್ದಿನ ಕಣ್ಣಿಡಲಾಗಿತ್ತು.

ಅದಾಗ್ಯೂ ಆ ಕುಟುಂಬ ಪೊಲೀಸರಿಗೆ ಯಾಮಾರಿಸಿ ಏ. 25 ರಂದೇ ಸೌದಿಗೆ ತೆರಳಿದೆ. ಈ ಪ್ರವಾಸದ ಹಿಂದೆ ಇರುವ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯ ಹೆಚ್ಚಿದೆ.

Edited By : Nirmala Aralikatti
PublicNext

PublicNext

11/05/2022 10:24 am

Cinque Terre

56.21 K

Cinque Terre

72