ವರದಿ- ಗಣೇಶ್ ಹೆಗಡೆ
ಬೆಂಗಳೂರು: ಮಸೀದಿ ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ದಕ ಬಳಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವ ಆದೇಶವನ್ನು ಮಂಗಳ ವಾರ ಹೊರಡಿಸಿದೆ. ಇನ್ಮುಂದೆ ಲೌಡ್ ಸ್ಪೀಕರ್ ಬಳಸುವವರು ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರಿಂದ ಅನಧಿಕೃತ ಮೈಕ್‌ಗಳ ತೆರವಿಗೆ 15 ದಿನಗಳ ಗಡುವನ್ನು ಸರ್ಕಾರ ನೀಡಿದೆ. ಸುಪ್ರಭಾತ ಅಭಿಯಾನ ವನ್ನು ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳು ಕೈಬಿಟ್ಟಿವೆ.
ಇನ್ನೂ ಧ್ವನಿವರ್ದಕದ ಕುರಿತು ಸರ್ಕಾರದ ನಿರ್ದೇಶನದ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಪ್ರಶ್ನಿಸಿದೆ.
೧. ಸರ್ಕಾರವು ಧ್ವನಿವರ್ಧಕದ ಅನುಮತಿ ನೀಡಲು ಒಂದು ಸಮಿತಿಯನ್ನು ಮಾಡಿದೆ. 15 ದಿನದಲ್ಲಿ ಅನುಮತಿ ಪಡೆಯಲು ಹೇಳಿದೆ. ಆದರೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ ಮತ್ತು ಶಬ್ದ ಮಾಲಿನ್ಯ ತಡೆ ಕಾಯಿದೆಯ ಪ್ರಕಾರ ಧಾರ್ಮಿಕ ಸ್ಥಳಗಳಿಗೆ ವರ್ಷವಿಡಿ ಧ್ವನಿವರ್ಧಕ ಬಳಸಲು ಅನುಮತಿ ನೀಡಲು ಅವಕಾಶ ಮತ್ತು ಅಧಿಕಾರ ಇದೆಯಾ?
೨. ಒಮ್ಮೆ ಅವಕಾಶ ನೀಡಿದರೆ ಅದರ ಶಬ್ದದ ಡೆಸಿಬಲ್ ಹೇಗೆ ನಿಯಂತ್ರಣ ಮಾಡುವಿರಿ?
೩. ಅಜಾನ್ ನಂತರ ಮಾಡುವ ಪ್ರವಚನಗಳಿಗೂ ಇದು ಅನ್ವಯ ಆಗುತ್ತದೆಯಾ?
PublicNext
11/05/2022 08:37 am