ಗಂಗಾವತಿ: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರುವ ಹನುಮ ಮಾಲಾಧಾರಿಗಳನ್ನು ಮುಸ್ಲಿಂ ಮುಖಂಡರು ಸ್ವಾಗತಿಸಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿನ ಚನ್ನಬಸವ ತಾತನ ದೇವಸ್ಥಾನದಿಂದ ಅಂಜನಾದ್ರಿಗೆ ಮಾಜಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ನೂರಾರು ಭಕ್ತರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಎಲ್ಲ ಪಾದಯಾತ್ರಿಗಳನ್ನು ಗಂಗಾವತಿಯ ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಶಾಸಕ ಅಮರೇಗೌಡ ಭಯ್ಯಾಪುರ ಸ್ವಾಗತಿಸಿದ್ದಾರೆ. ಗಂಗಾವತಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಹನುಮ ಮಾಲಾಧಾರಿಗಳ ಮೆರವಣಿಗೆ ಮೇಲೆ ಮುಸ್ಲಿಮರು ಪುಷ್ಪಧಾರೆ ಎರೆದಿದ್ದಾರೆ.
ನಮಗೆ ಧರ್ಮ ದಂಗಲ್ ಬೇಕಾಗಿಲ್ಲ. ಹಿಂದೂ-ಮುಸ್ಲಿಮ್ ನಾವೆಲ್ಲ ಒಂದೇ. ಜಾತಿ-ಧರ್ಮಕ್ಕಿಂತ ದೇಶ ದೊಡ್ಡದು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಇದೇ ವೇಳೆ ಹೇಳಿದ್ದಾರೆ.
PublicNext
16/04/2022 09:02 am