ಯಾದಗಿರಿ: ಕ್ಷುಲ್ಲಕ ಕಾರಣಕ್ಕೆ ಮೃಗಗಳಂತೆ ಗ್ರಾಮಸ್ಥರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪುಟ್‌ಪಾಕ್ ಗ್ರಾಮದಲ್ಲಿ ನಡೆದಿದೆ. ತಡವಾಗಿ ಬೆಳಕಿಗೆ ಬಂದ ಈ ಘಟನೆಯ ವೀಡಿಯೋ ಈಗ ವೈರಲ್ ಕೂಡ ಆಗಿದೆ.
ಮಕ್ಕಳು ಮಹಿಳೆಯರು ಎನ್ನದೇ ಕಲ್ಲು ಬಿಡಿಗೆಗಳಿಂದಲೇ ಗ್ರಾಮಸ್ಥರು ಹೊಡೆದಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದ ಯಾರೊಬ್ಬರೂ ದೂರು ಕೊಟ್ಟಿಲ್ಲ.
ಆದರೆ,ಘಟನೆಯ ವೀಡಿಯೋ ವೈರಲ್ ಆಗಿದ್ದೇ ತಡ, ಗುರುಮಠಕಲ್ ಪೊಲೀಸರು ಬರೋಬ್ಬರಿ 20 ಜನರ ಮೇಲೆ ಶಾಂತಿ ಕದಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಕೊಂಡಿದ್ದಾರೆ.
PublicNext
15/04/2022 05:11 pm