ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

10 ಮುಸ್ಲಿಂ ಹುಡುಗಿಯರನ್ನ ಹಾರಿಸಿಕೊಂಡು ಹೋಗಿ: ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಗದಗ: ಇನ್ಮುಂದೆ ಒಂದು ಹಿಂದೂ ಹುಡುಗಿಯನ್ನು ಹಾರಿಸಿಕೊಂಡು ಹೋದ್ರೆ ನೀವು 10 ಮುಸ್ಲಿಂ ಹುಡುಗಿಯನ್ನು ಹಾರಿಸಿಕೊಂಡು ಹೋಗಿ ಎಂದು ಪ್ರಮೋದ್ ಮುತಾಲಿಕ್ ಬಹಿರಂಗ ಸಮಾವೇಶದಲ್ಲಿ ಹಿಂದೂ ಯುವಕರಿಗೆ ಕರೆ ಕೊಟ್ಟಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, 'ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿದೆ. ಮೋಸದಿಂದ ಹೆಣ್ಣು ಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ. ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ, ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ' ಎಂದು ಮುಸ್ಲಿಂ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

Edited By : Vijay Kumar
PublicNext

PublicNext

14/04/2022 06:13 pm

Cinque Terre

48.55 K

Cinque Terre

82