ಹಾಸನ: ಇಡೀ ನಾಡಿನಾದ್ಯಂತ ಶ್ರೀರಾಮನವಮಿಯನ್ನು ಶದ್ಧಾ ಭಕ್ತಿಗಳಿಂದ ಸಂಭ್ರಮದಿಂದ ಆಚರಿಸಿದ್ರೆ ಹಾಸನದ ಬಲ್ಲೇನಹಳ್ಳಿ ಗ್ರಾಮಸ್ಥರು ಉಳಿದೆಲ್ಲಕಡೆಗಳಿಗಿಂದ ವಿಭಿನ್ನವಾಗಿ ವಿಶಿಷ್ಟವಾಗಿ ಆಚರಿಸಿದ್ದಾರೆ.
ಬಲ್ಲೇನಹಳ್ಳಿ ಗ್ರಾಮದಲ್ಲಿ ಅತ್ಯಂತ ಪುರಾತನವಾನ ಈಶ್ವರ ದೇವಸ್ಥಾನವೊಂದಿದೆ. ಸ್ಥಳ ಪುರಾಣ ವಿಶೇಷ ಇತಿಹಾಸ ಹೊಂದಿರುವ ದೇವಸ್ಥಾದ ಸುತ್ತಮುತ್ತ ಕಳೆದ ಹಲವಾರು ವರ್ಷಗಳಿಂದ ಭಾರಿ ಹುಲ್ಲು ಮುಳ್ಳುಕಂಟಿಗಳು ಬೆಳೆದು ದೇವಸ್ಥಾನವೇ ಮರೆಯಾಗುವ ರೀತಿಯಾಗಿತ್ತು.
ಇದರಿಂದ ದೇವಸ್ಥಾನಕ್ಕೆ ಹೋಗಿ ಬರುವವರಿಗೆ ಬಹಳ ಯೊಂದರೆಯಾಗುತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಸೇರಿ ದೇವಾಲಯ ಶುದ್ಧೀಕರಣಕ್ಕೆ ನಿರ್ಧಾರ ಮಾಡಿದರು. ಶ್ರೀರಾಮನವಮಿಯನ್ನು ಈಶ್ವರ ದೇವಾಲಯದ ಶುದ್ಧೀಕರಣದ ಮೂಲಕ ಆಚರಸುವುದು ಎಂದು ತೀರ್ಮಾನ ಮಾಡಿ ಎಲ್ಲರೂ ಶ್ರಮದಾನಕ್ಕೆ ಮುಂದಾದರು.ಮಹಿಳೆಯರು ಪುರುಷರು ಎಲ್ಲರೂ ಸೇರಿ ಒಟ್ಟಾಗಿ ದೇವಸ್ಥಾನದ ಆವಾರ ಶುದ್ಧಗೊಳಿಸಿ ರಾಮನವಮಿ ಆಚರಿಸಿದ್ರು.
PublicNext
11/04/2022 07:53 am