ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: 16 ವರ್ಷಗಳ ಬಳಿಕ ಮಾರಿಕಾಂಬ ಜಾತ್ರೆ: ಊರಿಗೆ ಮುಳ್ಳು ಬೇಲಿ ಹಾಕಿ ಸ್ವಯಂ ದಿಗ್ಬಂಧನ !

ದಾವಣಗೆರೆ: ಗ್ರಾಮದ ಮಾರಿಕಾಂಬಾ ಜಾತ್ರೆಗೆ ಊರಿಗೆ ಮುಳ್ಳು ಬೇಲಿ ಹಾಕಿ ದಿಗ್ಬಂಧನ ವಿಧಿಸಿಕೊಂಡು ದಾವಣಗೆರೆ ಸಮೀಪವಿರುವ ಹೊಸ ಕುಂದುವಾಡ ಗ್ರಾಮದಲ್ಲಿ ಆಚರಣೆ ಮಾಡಲಾಗುತ್ತಿದೆ.

ಮಾರಿಕಾಂಬಾ ಜಾತ್ರೆಗೆ ಊರಿನ ಸುತ್ತಲೆಲ್ಲ ಬೇಲಿ ಹಾಕಿ ಗ್ರಾಮಕ್ಕೆ ದಿಗ್ಬಂಧನ ವಿಧಿಸಲಾಗಿದೆ. ಗ್ರಾಮದ 2 ಕಿಲೋ ಮೀಟರ್ ಸುತ್ತಲೂ ಮುಳ್ಳಿನ ಬೇಲಿ ಹಾಕಲಾಗಿದ್ದು, ಇಡೀ ಗ್ರಾಮಕ್ಕೆ 9 ದಿನಗಳ ಕಾಲ ಊರಿನ ಮುಖ್ಯ ದ್ವಾರ ಬಿಟ್ಟರೆ ಬೇರೆ ಎಲ್ಲೂ ಒಳ ಹೋಗಲು, ಹೊರ ಬರಲು ಅವಕಾಶವಿಲ್ಲ.

ಊರಿನ ಸುತ್ತ ಪ್ರವೇಶವಾಗುವ ಕಡೆಯಲೆಲ್ಲಾ ಕಾವಲುಗಾರರು ಕಾವಲು ಕಾಯುತ್ತಿರುತ್ತಾರೆ.‌ ಹಾಲು, ಮೊಸರು, ಊಟ, 9 ದಿನಗಳ ಕಾಲ ಊರಿಂದ ಹೊರಗಡೆ ಹೋಗುವ ಆಗಿಲ್ಲ. 2007 ರಲ್ಲಿ ನಡೆದಿದ್ದ ಜಾತ್ರೆಯೇ ಕೊನೆ. ಇಂದಿಗೆ 16 ವರ್ಷಗಳ ನಂತರ ನಡೆಯುತ್ತಿರುವ ಮಾರಿಕಾಂಬಾ ಜಾತ್ರೆಯ ಸಂಭ್ರಮ ಮನೆ ಮಾಡಿದೆ. 9 ದಿನಗಳ ಕಾಲ ಕಾಲಿಗೆ ಚಪ್ಪಲಿ ಹಾಕಿಕೊಳ್ಳದೆ ಗ್ರಾಮಸ್ಥರು ಓಡಾಡೋದು ವಿಶೇಷ.

9 ದಿನಗಳ ಕಾಲ ಗ್ರಾಮದ ಜನರು ಯಾವುದೇ ದುಶ್ಚಟಗಳನ್ನು ಮಾಡುವಂತಿಲ್ಲ. ಬೀಡಿ, ಸಿಗರೇಟ್, ಗುಟ್ಕಾ ಹಾಗೂ ಮದ್ಯಪಾನ ಮಾಡುವುದಕ್ಕೂ‌ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ಮಾರಿಕಾಂಬ ತಾಯಿ ಶಿಕ್ಷಿಸುತ್ತಾಳೆ ಎಂಬ ನಂಬಿಕೆ ಈಗಲೂ ಚಾಲ್ತಿಯಲ್ಲಿದೆ.

Edited By :
PublicNext

PublicNext

10/04/2022 11:57 am

Cinque Terre

53.14 K

Cinque Terre

0