ಚಿತ್ರದುರ್ಗ: ಹಿರಿಯೂರು ತಾಲೂಕಿನ ದುಗ್ಗಾಣಿಹಟ್ಟಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿದೆ. ಈ ಗುಂಪು ಘರ್ಷಣೆಯಲ್ಲಿ ನಾಲ್ವರು ಗಾಯಕೊಂಡಿದ್ದಾರೆ.
ಗಾಯಗೊಂಡವರನ್ನ ಚಿತ್ರಲಿಂಗಪ್ಪ, ಕುಂಟಪ್ಪ, ಕವಿತಾ ಹಾಗೂ ಬಸವರಾಜ್ ಎಂದು ಗುರುತಿಸಲಾಗಿದೆ. ಈಗಾಗಲೇ ಇವರನ್ನ ಆಸ್ಪತ್ರೆಗೂ ದಾಖಲಿಸಲಾಗಿದೆ.
ಚಿತ್ರಲಿಂಗಪ್ಪ ಮತ್ತು ಚಿತ್ರಣ್ಣ ಕಟುಂಬಗಳ ನಡುವಿನ ಘರ್ಷಣೆಯಿಂದ ಈ ಘಟನೆ ನಡೆದಿದ್ದು, ಈ ಗುಂಪು ಘರ್ಷಣೆ ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗುಂಪು ಘರ್ಷಣೆಯ ದೃಶ್ಯ ಮೋಬೈಲ್ ನಲ್ಲೂ ಸೆರೆ ಆಗಿದೆ.
PublicNext
02/04/2022 02:23 pm