ಹಾಸನ: ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡದಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿ ವ್ಯಾಪಾರಿ ರೆಹಮಾನ್ ಷರೀಫ್ ಅವರಿಗೆ ನೋಟೀಸ್ ಜಾರಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೆಹಮಾನ್ ಷರೀಫ್, '1970ರಿಂದ ಇಲ್ಲಿಯವರೆಗೂ ಬಾಡಿಗೆದಾರನಾಗಿದ್ದೇನೆ. ಈಗ ನನಗೆ 2002ರ ಕಾಯ್ದೆ ಪ್ರಕಾರ ನೋಟೀಸ್ ನೀಡಲಾಗಿದೆ. ಮಳಿಗೆ ಖಾಲಿ ಮಾಡಿದರೆ ಬಡವರಾದ ನಮಗೆ ತೊಂದರೆಯಾಗುತ್ತದೆ. ರಥೋತ್ಸವ ಹಿನ್ನೆಲೆ ಗುತ್ತಿಗೆ ಅವಧಿವರೆಗೆ ಮುಂದುವರಿಸಿ, ವ್ಯಾಪಾರಕ್ಕೆ ಅವಕಾಶ ನೀಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
PublicNext
02/04/2022 02:02 pm