ಕತ್ನಳ್ಳಿ: ಹಿಜಾಬ್ ಆದ್ಮೇಲೆ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಆದರೆ, ವಿಜಯಪುರದ ಗುರುಚಕ್ರವರ್ತಿ ಬಬಲಾದಿ ಸದಾಶಿವ ಅಜ್ಜನ ಜಾತ್ರೆಯಲ್ಲಿ ಇದಕ್ಕೆ ಆಸ್ಪದವೇ ಇಲ್ಲ. ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಆಗಿದೆ. ಬನ್ನಿ, ಹೇಳುತ್ತೇವೆ.
ತಾಲೂಕಿನ ಕತ್ನಳ್ಳಿಯ ಬಬಲಾದಿ ಸದಾಶಿವ ಅಜ್ಜನವರ ಜಾತ್ರೆ ಪ್ರತಿ ವರ್ಷ ನಡೆಯುತ್ತಿದೆ. ಇಲ್ಲಿ ಹಿಂದೂ-ಮುಸ್ಲಿಂ ಒಟ್ಟಿಗೆ ಸೇರಿಯೇ ಜಾತ್ರೆ ಮಾಡುತ್ತಾರೆ.
ಯಾವುದೇ ಭೇದ-ಭಾವ ಇಲ್ಲದೇನೆ ಜಾತ್ರೆ ನಡೆಸಲಾಗುತ್ತಿದ್ದು, ಸೌಹಾರ್ಯದಿಂದಲೇ ಹಿಂದೂ-ಮುಸ್ಲಿಂ ವ್ಯಾಪಾರ ನಡೆಸುತ್ತಿದ್ದಾರೆ. ಇಲ್ಲಿಯ ಮುಸ್ಲಿಂ ವ್ಯಾಪಾರಿಗಳಿ ಯಾವುದೇ ನಿರ್ಬಂಧಗಳನ್ನ ಹೇಳಲಾಗಿಲ್ಲ.
PublicNext
02/04/2022 01:46 pm