ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ತ್ರಿವೇಣಿ ಸಂಗಮದಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಭಕ್ತಾದಿಗಳು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಇಲ್ಲಿ ಇಂತಹ ವೈಭವ ನೋಡಲು ಸಿಕ್ಕಿರಲಿಲ್ಲ. ಆದರೆ ಈ ವರ್ಷ ಭಕ್ತಾದಿಗಳು ಸಾಗರೋಪಾದಿಯಲ್ಲಿ ಇಲ್ಲಿಗೆ ಆಗಮಿಸಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡ್ತಿರೋ ಭಕ್ತರು ಗುಂಜನರಸಿಂಹ ದೇವರ ದರ್ಶನವನ್ನೂ ಪಡೆಯುತ್ತಿದ್ದಾರೆ. ವಿಶೇಷವಾಗಿ ತ್ರಿವೇಣಿ ಸಂಗಮದಲ್ಲಿ ಗಂಗಾಮಾತೆ ಪೂಜೆ ಕೂಡ ನೆರವೇರಿಸಲಾಗುತ್ತಿದೆ. ವಿವಿಧ ಗ್ರಾಮದ ದೇವರ ವಿಗ್ರಹಗಳನ್ನ ತಂದು ಪೂಜೆ ಸಲ್ಲಿಸುವದು ಕೂಡ ಇಲ್ಲಿ ವಾಡಿಕೆ ಇದೆ.
ಕಪ್ಪಡಿ ಜಾತ್ರೆ,ಬೋಪ್ಪೆಗೌಡನಪರು ಮಠಕ್ಕೆ ಭೇಟಿ ನೀಡಿದ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಹೋಗುತ್ತಿದ್ದಾರೆ. ಮೈಸೂರು,ಚಾಮರಾಜನಗರ,ಮಂಡದ್ಯ ಭಾಗದಿಂದಲೇ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ತಾಲೂಕಿನ ಆಡಳಿತ ಮಂಡಳಿ ಇಲ್ಲಿ ತಾತ್ಕಾಲಿಕ ಸ್ನಾನದ ಕೊಠಡಿ ಹಾಗೂ ಶೌಚಾಲಯವನ್ನೂ ನಿರ್ಮಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದೆ.
PublicNext
02/04/2022 10:43 am