ನವದೆಹಲಿ: ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿವಾದಾತ್ಮಕ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಮೌಲ್ವಿ ತಮ್ಮ ದ್ವೇಷದ ಭಾಷಣಕ್ಕಾಗಿ ಕ್ಷಮೆ ಕೇಳಿದ್ದಾರೆ.
ಶುಕ್ರವಾರ, ಜುಮ್ಮಾ ನಮಾಜ್‌ನ ಉದ್ದೇಶಿಸಿ 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವನ್ನು ಪ್ರದರ್ಶಿಸುವುದನ್ನು ನಿಲ್ಲಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮೌಲವಿ ಚಲನಚಿತ್ರ ನಿರ್ಮಾಪಕರು ಮತ್ತು ಹಿಂದೂಗಳಿಗೆ ಬೆದರಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ.
ಪತ್ರಕರ್ತ ಆಶಿಶ್ ಕೊಹ್ಲಿ ವಿವಾದಾತ್ಮಕ ಧರ್ಮಗುರು ಮೌಲ್ವಿ ಫಾರೂಕ್ ಮಾಡಿದ ದ್ವೇಷದ ಭಾಷಣದ ವಿಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಫಾರುಖ್, ಕಾಶ್ಮೀರ್ ಫೈಲ್ಸ್ ಚಿತ್ರ ತಂಡಕ್ಕೆ ಬೆದರಿಕೆ ಹಾಕುವ ಮಾತುಗಳಿದ್ದು, ಚಿತ್ರದಲ್ಲಿ ಪಂಡಿತರ ಹತ್ಯೆ ಬಗ್ಗೆ ಮಾತ್ರ ಹೇಳಲಾಗಿದೆ. ಆದರೆ ಸಾವಿರಾರು ಮುಸ್ಲಿಮರ ಸಾವುಗಳ ಬಗ್ಗೆ ಸ್ವಲ್ಪವೂ ತೋರಿಸಿಲ್ಲ ಎಂದು ಹೇಳಿದ್ದಾನೆ.
ಮುಸ್ಲಿಮರು ಈ ದೇಶವನ್ನು 800ಕ್ಕೂ ಅಧಿಕ ವರ್ಷಗಳ ಕಾಲ ಆಳಿದ್ದಾರೆ. ಆದರೆ 70 ವರ್ಷಗಳ ಹಿಂದೆ ಹಿಂದೂಗಳು ಅಧಿಕಾರಕ್ಕೆ ಬಂದಿದ್ದಾರಷ್ಟೇ. ನೀವು ನಮ್ಮನ್ನು ಗುರಿಯಾಗಿಸಲು ಬಯಸುತ್ತಿದ್ದೀರಿ. ವಾಸ್ತವವೆಂದರೆ ನೀವು ಸಾವು ಮತ್ತು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕಲ್ಮಾ-ಪಠಣ ಮಾಡುವ ಮುಸ್ಲಿಮರನ್ನು ನೀವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.
ಕ್ಷಮೆ ಕೇಳಿದ ಮೌಲ್ವಿ: ದ್ವೇಷ ಭಾಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಫಾರುಕ್ ಕ್ಷಮೆ ಕೇಳಿದ್ದಾನೆ. ಕಾನೂನು ಕ್ರಮದ ಎಚ್ಚರಿಕೆ ಬಂದ ಬೆನ್ನಲ್ಲಿಯೇ ವಿಡಿಯೋ ಪ್ರಕಟಿಸಿ ದೇಶದ ಕ್ಷಮೆ ಯಾಚಿಸಿದ್ದಾರೆ. ಯಾವುದೇ ಧರ್ಮದ ವಿರುದ್ಧವಾಗಿ ನಾನು ಮಾತನಾಡಿಲ್ಲ. ಬದಲಾಗಿ ಸರ್ಕಾರದ ವಿರುದ್ಧವಾಗಿ ಮಾತನಾಡಿದ್ದೇನೆ. ಇಂಥ ಚಿತ್ರಗಳು ಬಂದಲ್ಲಿ ಸಮಾಜದ ಸ್ವಾಸ್ತ್ಯ ಹಾಳಾಗುತ್ತದೆ. ಸರ್ಕಾರ ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಕಾಶ್ಮೀರಿ ಪಂಡಿತರು ನಮ್ಮ ಹೆಮ್ಮೆ, ಅವರು ಇಲ್ಲದೇ ಇದ್ದಲ್ಲಿ ಜಮ್ಮು ಕಾಶ್ಮೀರ ಪೂರ್ಣವಾಗುವುದಿಲ್ಲ ಎಂದು ಹೇಳಿದ್ದಾರೆ.
PublicNext
28/03/2022 07:59 am