ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆಯಲ್ಲಿ ಬಲು ಜೋರು ಬಣ್ಣದೋಕುಳಿ

ಬಾಗಲಕೋಟೆ : ಬಾಗಲಕೋಟೆ ನಗರದಲ್ಲಿ ಇಂದಿನಿಂದ 3 ದಿನಗಳ ಕಾಲ ಭಜ೯ರಿ ಹೋಳಿ ಬಣ್ಣದಾಟ ಆರಂಭವಾಗಿದೆ. ಬಣ್ಣದಾಟಕ್ಕೆಂದೇ ವೇದಿಕೆಯನ್ನು ತಯಾರು ಮಾಡಲಾಗಿದ್ದು ಸ್ಟೇಜ್ ಹತ್ತಿದ್ದ ಯುವಕ, ಯುವತಿಯರು ಸಖತ್ ಸ್ಟೆಪ್ ಹಾಕುತ್ತಿದ್ದಾರೆ.

ಒತ್ತಡದ ಬದುಕಿನ ಮಧ್ಯೆಯೇ ಬಣ್ಣದಾಟದಲ್ಲಿ ಮಿಂದೆದ್ದ ಯುವತಿಯರು ಬಾಯಿ ಬಾಯಿ ಬಡಿದುಕೊಂಡು ಬೈಕ್ ಏರಿ ಎಂಜಾಯ್ ಮಾಡುತ್ತಿದ್ದಾರೆ.

ಇನ್ನು ವಿದ್ಯಾಗಿರಿಯ ಸಕ೯ಲ್ ನಲ್ಲಿ ಕಿಕ್ಕಿರಿದು ಸೇರಿದ ಜನ ಸಮೂಹ ರೈನ್ ಡಾನ್ಸ್ ಜೊತೆಗೆ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಒಟ್ಟಾರೆಯಲ್ಲಿ ವಯಸ್ಸಿನ ಹಂಗು ತೊರೆದು ಮಕ್ಕಳು, ಮಹಿಳೆಯರು, ವಯೋವೃದ್ಧರು ಜೊತೆಯಾಗಿ ಹೆಜ್ಜೆ ಹಾಕಿ ಹೋಳಿ ಹಬ್ಬ ಆಚರಿಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

18/03/2022 03:22 pm

Cinque Terre

48.29 K

Cinque Terre

0