ತುಮಕೂರು: ಅನ್ನ-ನೀರು ಹಾಗೂ ಶಿಕ್ಷಣದ ವಿಚಾರದಲ್ಲಿ ಯಾರೂ ಕೂಡ ಜಾತಿವಾದಿ ಆಗಬಾರದು. ನಮ್ಮದು ಭಾವೈಕ್ಯ ದೇಶ. ರಾಜಕೀಯ ಕೆಸರೆರಚಾಟದ ಮಧ್ಯೆ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ತುಮಕೂರು ಎಲೆರಾಂಪುರ ಕುಂಚಿಟಗ ಮಹಾ ಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಹೇಳಿದ್ದಾರೆ.
ಹಿಜಾಬ್- ಕೇಸರಿ ಶಾಲು ವಿವಾದದ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿ-ಮಂಗಳೂರಿನಿಂದ ಆರಂಭವಾದ ಹಿಜಾಬ್ ಜ್ವಾಲೆ ಎಲ್ಲಾ ಶಾಲಾ ಕಾಲೇಜುಗಳಿಗೆ ಹಬ್ಬಿದೆ. ಈ ವಿಷಯವಾಗಿ ಧರ್ಮ ಧರ್ಮಗಳ ಮಧ್ಯೆ ಕಂದಕ ಸೃಷ್ಟಿ ಮಾಡೋ ಅಗತ್ಯತೆ ಇರಲಿಲ್ಲ. ಸಣ್ಣ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಹಬ್ಬಿಸೋದು ಕೆಟ್ಟ ಸಂಸ್ಕೃತಿ. ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಬದುಕೋ ದೇಶ ನಮ್ಮದು. ಕೂತು ಬಗೆಹರಿಸುವ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ವಿಷಬೀಜ ಬಿತ್ತುವ ಕೆಲಸ ಯಾರೂ ಮಾಡಬಾರದು. ಕೋರ್ಟ್‌ನಲ್ಲಿ ಒಳ್ಳೆಯ ತೀರ್ಪು ಹೊರಬೀಳುವ ಆಶಾ ಭಾವನೆ ಇದೆ. ಹಿಂದೂ ಮುಸ್ಲಿಂರಲ್ಲಿ ಮನವಿ ಮಾಡ್ತೀನಿ ಧರ್ಮ ಧರ್ಮಗಳಲ್ಲಿ ಕಂದಕ ಉಂಟು ಮಾಡೋದು ಬೇಡ. ಮಠಗಳಲ್ಲಿ ಯಾವ ಜಾತಿ ಅಂತಾ ಕೇಳದೆ ಶಿಕ್ಷಣ ನೀಡುತ್ತಾರೆ. ಇವತ್ತು ಜಾತಿಯ ಕಿಚ್ಚು ಜ್ವಾಲೆಯಂತೆ ಹಬ್ಬಿದೆ, ಇದು ಮಕ್ಕಳಲ್ಲಿ ವಿಷಬೀಜ ಬಿತ್ತೋದು ಬೇಡ ಎಂದ ಹನುಮಂತನಾಥ ಶ್ರೀಗಳು ಮನವಿ ಮಾಡಿದ್ದಾರೆ.
PublicNext
18/02/2022 10:40 am