ವಿಜಯಪುರ: ರಾಜ್ಯದಲ್ಲಿ ಹಿಜಾಬ್ ಬೆಂಕಿ ಧಗ ಧಗಿಸುತ್ತಿದೆ. ಇದರ ಮಧ್ಯೆ ಕಾಲಜ್ಞಾನಿಯೊಬ್ಬರ ಭವಿಷ್ಯ ವೈರಲ್ ಆಗಿದೆ.
ವಿಜಯಪುರ ಜಿಲ್ಲೆಯ ಬಬಲಾದಿ ಮಠದಲ್ಲಿ ಸುಮಾರು 500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನವನ್ನು, ಪ್ರತಿ ವರ್ಷ ಓದಲಾಗುತ್ತದೆ.
ತೆಲುಗು ಮಾತನಾಡುವ ರಾಜ್ಯಕ್ಕೆ ಜಲಕಂಟಕ ಎಂದು 2021ರ ಮಾರ್ಚ್ ತಿಂಗಳಿನಲ್ಲಿ ಬಬಲಾದಿ ಮಠದ ಸಿದ್ರಾಮಯ್ಯ ಹೊಳಿಮಠ ಅವರು ಕಾಲಜ್ಞಾನದ ಕುರಿತು ನುಡಿದಿದ್ದರು. ವಾಯುಭಾರ ಕುಸಿತದಿಂದ ತಿರುಪತಿಯಲ್ಲಿ ಜಲಪ್ರಳಯವಾಗಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದ್ದು ಎಲ್ಲರಿಗೂ ತಿಳಿದಿದೆ.
ಕಳೆದ ವರ್ಷದ ಶಿವರಾತ್ರಿಯ ಸಂದರ್ಭದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿದ್ದು ಮುತ್ಯಾ ಕರಿಕಲ್ಲಿನ ಮೇಲೆ ಬಿಳಿರೇಖೆಯಂತೆ ಗೂಡಾರ್ಥದ ಭವಿಷ್ಯವನ್ನು ನುಡಿದಿದ್ದರು. 'ಇನ್ನು ಮುಂದೆ ಅನ್ಯ ಕೋಮಿನ ದಂಗೆಗಳು ಏಳುತ್ತವೆ' ಎನ್ನುವ ಭವಿಷ್ಯ ಬರೆದಿದ್ದರು.
ಇದೀಗ ಅಕ್ಷರಶಃ ನಿಜವಾಗಿದೆ. ಹಿಜಾಬ್ ಘಟನೆಗೂ ಸಿದ್ದು ಮುತ್ಯಾ ಅವರು ರೇಖೆ ಮೂಡಿಸಿ ಬರೆದಿರುವ ಈ ವಿಷಯಕ್ಕೂ ತಾಳೆಯಾಗುತ್ತಿದ್ದು, ಕಾಲಜ್ಞಾನದ ಬಗ್ಗೆ ಇನ್ನಷ್ಟು ಅಚ್ಚರಿ ಮೂಡಿಸುವಂತಿದೆ.
PublicNext
16/02/2022 10:28 pm