ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಪಂಚಮಸಾಲಿ ಮಹಿಳಾ ಪೀಠ ಸ್ಥಾಪನೆಗೆ ಸದ್ದಿಲ್ಲದೆ ಸಿದ್ದತೆ

ಕೊಪ್ಪಳ: ಪಂಚಮಸಾಲಿ ಮಹಿಳಾ ಪೀಠ ಸ್ಥಾಪನೆ ಕೂಗು ಈಗ ಕೇಳಿ ಬರುತ್ತಿದೆ. ಸದ್ದಿಲ್ಲದೇ ಪೀಠ ಸ್ಥಾಪನೆಯ ಸಿದ್ದತೆನೂ ನಡೀತಾ ಇದೆ.

ಸಮಾಜದಲ್ಲಿ 40 ಲಕ್ಷ ಮಹಿಳೆಯರಿದ್ದಾರೆ. ಹೆಸರಿಗೆ ಮಾತ್ರ ಕಿತ್ತೂರು ಚೆನ್ನಮ್ಮ ಅಂತಾರೆ. ಆದರೆ ಈಗ ಇರೋ ಎರಡೂ ಪೀಠದಿಂದ ಮಹಿಳೆಯರ ಅಭಿವೃದ್ಧಿ ಆಗಿಯೇ ಇಲ್ಲ ಎಂದು ಪಂಚಮಸಾಲಿ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬುದನೂರ ದೂರಿದ್ದಾರೆ.

ಇವರೇ ಈಗ ಪಂಚಮಸಾಲಿ ಮಹಿಳಾ ಪೀಠ ಸ್ಥಾಪನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಒಂದು ಸಭೆ ಕೂಡ ಮಾಡಿದ್ದಾರೆ. ಈ ಮಹಿಳಾ ಪೀಠದ ಬಗ್ಗೆ ಕೂಡಲಸಂಗಮ ಮತ್ತು ಹರಿದ್ವಾರದ ಸ್ವಾಮಿಗಳ ಗಮನಕ್ಕೂ ತರಲಾಗಿದೆ ಎಂದು ಕಿಶೋರಿ ಬುದನೂರು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಮಹಿಳಾ ಪೀಠ ಸ್ಥಾಪನೆ ವಿಷಯ ಕೈ ಬಿಡುವುದಿಲ್ಲ.ಸಮಾಜದ ಮೂರು ಪೀಠಗಳು ಮಹಿಳಾ ಪೀಠದ ಸ್ಥಾಪನೆಗೆ ಒಪ್ಪಿಗೆ ಸೂಚಿಸುತ್ತಾರೆ ಅನ್ನೋ ಭರವಸೆಯ ಮಾತುಗಳನ್ನೇ ಆಡಿದ್ದಾರೆ ಕಿಶೋರಿ ಬುದನೂರ.

Edited By : Manjunath H D
PublicNext

PublicNext

24/01/2022 03:43 pm

Cinque Terre

27.76 K

Cinque Terre

0