ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾವಚಿತ್ರ ಅಳವಡಿಕೆಗೆ ಗುಂಪುಗಳ ಮಧ್ಯೆ ಮಾರಾಮಾರಿ,144 ಸೆಕ್ಷನ್ ನಿಷೇಧಾಜ್ಞೆ ಜಾರಿ

ಕಲಬುರಗಿ:ನಗರದ ಆಳಂದ ರಸ್ತೆಯಲ್ಲಿರುವ ಶಹಬಜಾರ್ ನಾಕಾದ ವೃತ್ತದಲ್ಲಿ ನಿನ್ನೆ ಭಾವಚಿತ್ರ ಅಳವಡಿಕೆ ವಿಚಾರದಲ್ಲಿ ಎರಡು ಸಮುದಾಯಗಳ ಮಧ್ಯೆ ಘರ್ಷಣೆ ನಡೆದಿದ್ದು, ನ್ಯೂ ರಾಘವೇಂದ್ರ ನಗರ ಮತ್ತು ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಾಕಾ ಪ್ರದೇಶದಲ್ಲಿ ‌ಮುನ್ನೆಚ್ಚರಿಕೆ ಕ್ರಮವಾಗಿ ಖಾಕಿ ಸರ್ಪಗಾವಲು ಹಾಕಲಾಗಿದೆ. ಪಿಎಸ್‌ಐ, ಸಿಪಿಐ, ಎಸಿಪಿ ಹಾಗೂ ಡಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ ಹಾಗೂ ಇಂದು ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಹಿನ್ನಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿ ಗೊಳಿಸಲಾಗಿದೆ.

Edited By : Shivu K
PublicNext

PublicNext

21/01/2022 04:57 pm

Cinque Terre

96.78 K

Cinque Terre

0